ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂಗ್ರೆಸ್ ಅಧಿಕಾರಕ್ಕೆ ಬಂದು ದೇಶವಿರೋಧಿಗಳಿಗೆ ಬಲ ಬಂದಿದೆ :ಡಿಸಿಎಂ ಫಡ್ನವಿಸ್

ಮಂಗಳೂರಿನಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಭಾಷಣ ಮಾಡಿ,ಇವತ್ತು ನಮ್ಮ ಪ್ರಮುಖ ಬೂತ್ ಕಾರ್ಯಕರ್ತರು ಜೊತೆಗಿದ್ದೀರಿ.ಮಂಗಳೂರು ಮುಂಬೈನ ಬಹಳ ದೊಡ್ಡ ಸಂಪರ್ಕ ಸೇತು. ಮಂಗಳೂರಿನ ಹಲವರು ಮುಂಬೈನಲ್ಲಿ ಬಿಜೆಪಿ ಬೆಳೆಸಲು ಕೆಲಸ ಮಾಡ್ತಾ ಇದಾರೆ, ಅಲ್ಲಿನ ಕುಟುಂಬಗಳೇ ಇವತ್ತು ನನಗೆ ಇಲ್ಲಿ ಸಿಕ್ಕಿದೆ, 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸೋ ಚುನಾವಣೆಯಾಗಿದೆ ಎಂದರು.
03:43 PM Mar 12, 2024 IST | Nisarga K

ಮಂಗಳೂರು:  ಮಂಗಳೂರಿನಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಭಾಷಣ ಮಾಡಿ,ಇವತ್ತು ನಮ್ಮ ಪ್ರಮುಖ ಬೂತ್ ಕಾರ್ಯಕರ್ತರು ಜೊತೆಗಿದ್ದೀರಿ.ಮಂಗಳೂರು ಮುಂಬೈನ ಬಹಳ ದೊಡ್ಡ ಸಂಪರ್ಕ ಸೇತು. ಮಂಗಳೂರಿನ ಹಲವರು ಮುಂಬೈನಲ್ಲಿ ಬಿಜೆಪಿ ಬೆಳೆಸಲು ಕೆಲಸ ಮಾಡ್ತಾ ಇದಾರೆ, ಅಲ್ಲಿನ ಕುಟುಂಬಗಳೇ ಇವತ್ತು ನನಗೆ ಇಲ್ಲಿ ಸಿಕ್ಕಿದೆ, 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸೋ ಚುನಾವಣೆಯಾಗಿದೆ ಎಂದರು.

Advertisement

ನಾವು ಸರ್ಕಾರಗಳನ್ನ 5 ವರ್ಷಗಳಿಗೊಮ್ಮೆ ಚುನಾಯಿಸ್ತೇವೆ ಆದರೆ ಮೋದಿ ಹತ್ತು ವರ್ಷಗಳಲ್ಲಿ ನೂರು ವರ್ಷದ ಕೆಲಸ ಮಾಡಿದ್ದಾರೆ. ಮೋದಿ ಗ್ಯಾರಂಟಿ ಕಾಂಗ್ರೆಸ್ ನ ಗ್ಯಾರಂಟಿಗಳಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಡಿರೋ ಗ್ಯಾರಂಟಿಗಳು ಯಾವುದೂ ಪೂರ್ಣವಾಗಿಲ್ಲ ಎಂದು ಟೀಕಿಸಿದರು.

ಜನರನ್ನ ಮೂರ್ಖರನ್ನಾಗಿ ಮಾಡಿ ಸಿದ್ದರಾಮಯ್ಯ ಸರ್ಕಾರ ಬಂದಿದೆ. ಮೋದಿ ಗ್ಯಾರಂಟಿ ಅನ್ನೋದು ಗ್ಯಾರಂಟಿಗಳ ಗ್ಯಾರಂಟಿ.ನರೇಂದ್ರ ಮೋದಿಯವರ ಟ್ರಾಕ್ ರೆಕಾರ್ಡ್ ನೋಡಿದ್ರೆ ಗೊತ್ತಾಗುತ್ತೆ, ಕೋಟ್ಯಾಂತರ ಜನರಿಗೆ ನೀರು, ವಿದ್ಯುತ್, ಶೌಚಾಲಯ ಸಿಕ್ಕಿದೆ ಮೋದಿಯವರ ಯೋಜನೆ ಪಡೆದುಕೊಳ್ಳಲು ಯಾರಿಗೂ ಒಂದು ರೂ. ಕೊಡೋದು ಬೇಡ ಆ ಯೋಜನೆಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತೆ ಎಂದು ಹೆಮ್ಮೆಯಿಂದ ಪ್ರಧಾನಿಯವರನ್ನು ಷ್ಲಾಗಿಸಿದರು.

Advertisement

ನಿನ್ನೆ ಮೋದಿಜೀ ಒಂದು ಮಿಸೈಲ್ ಬಗ್ಗೆ ಟ್ವೀಟ್ ಮಾಡಿದ್ರು, ಹಾಗಾದ್ರೆ ಈ ಮಿಸೈಲ್ ಗಳಿಂದ ನಮಗೇನು ಲಾಭ ಅಂತ ಕೆಲವರು ಕೇಳಬಹುದು ಆದರೆ ಭಾರತದ ತಾಕತ್ತನ್ನ ಬೇರೆ ದೇಶಗಳ ಎದುರು ನಾವು ತೋರಿಸ್ತಾ ಇದೀವಿ.ಚೀನಾ, ಅಮೆರಿಕಾದ ಸರಿಸಮಾನವಾಗಿ ಭಾರತದ ಶಕ್ತಿಯುತವಾಗ್ತಿದೆ,ದೇಶ ವಿರೋಧಿ ಜನರಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ಕೊಡ್ತಾ ಇದೆ. ಪಾಕಿಸ್ತಾನ ಪರ ಘೋಷಣೆ ಕೂಗೋರನ್ನ ಬೆಂಬಲಿಸುವ ಸರ್ಕಾರ ಎಂಥದ್ದು?
ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ನಂತರ ದೇಶವಿರೋಧಿಗಳಿಗೆ ಬಲ ಬಂದಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಆಗಿದೆ.ನಾವು ಬಿಜೆಪಿಗೆ ಓಟ್ ಹಾಕ್ತಿಲ್ಲ, ಭಾರತಕ್ಕಾಗಿ ಮತ ಚಲಾಯಿಸ್ತಾ ಇದೀವಿ. ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ಉತ್ತರ ಕೊಡಬೇಕಿದೆ.ಬೂತ್ ಮಟ್ಟದಲ್ಲಿ ನಾವು ಪಕ್ಷ ಗಟ್ಟಿ ಮಾಡ ಬೇಕು,ಪ್ರತೀ ಬೂತ್ ಗಳಲ್ಲಿ ಮೋದಿ ಸರ್ಕಾರದ ಫಲಾನುಭವಿಗಳನ್ನ ಭೇಟಿ ಮಾಡಿ.ನಳಿನ್ ಕುಮಾರ್‌ ಕಟೀಲ್ ಅವರ ಅವಧಿಯಲ್ಲಿ ಬಹಳ ಅಭಿವೃದ್ಧಿಯಾಗಿದೆ.ಅವರು ಜನರ ನಡುವೆ ಇರೋ ಪಕ್ಷದ ಓರ್ವ ನಾಯಕ ಎಂದರು.

ನಮ್ಮ ಸ್ವಾಭಿಮಾನಕ್ಕಾದ ಅಪಮಾನದಿಂದ ಹೊರಬಂದು ರಾಮಮಂದಿರ ನಿರ್ಮಿಸಲಾಗಿದೆ
ನವ ಭಾರತ ನಿರ್ಮಿಸೋ ಕೆಲಸಕ್ಕೆ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ, ಹೀಗಾಗಿ ನಾವೆಲ್ಲ ಅವರ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಕರ್ನಾಟಕದಲ್ಲಿ ಸರ್ಕಾರ ಇಲ್ಲದಿದ್ದರೂ ಈ ಬಾರಿ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲಬಾರದು ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಕರ್ನಾಟಕ, ಆಂದ್ರ, ತಮಿಳುನಾಡು ಎಲ್ಲಾ ಕಡೆ ಮೋದಿ ಹವಾ ಇದೆ ಎಂದು ಹೆಮ್ಮೆಯಿಂದ ಹೇಳಿದರು.

Advertisement
Tags :
BJPbridgeCongressDCMdevendraLatestNewsmangaluruMUMBAINewsKannadaPMNarendraModispeech
Advertisement
Next Article