ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಕೇಸರಿ ಬಣ್ಣʼದಲ್ಲಿ ಹೊಸ ಲೋಗೋ ಅನಾವರಣ ಮಾಡಿದ ದೂರದರ್ಶನ ನ್ಯೂಸ್

ದೇಶಾದ್ಯಂತ ರಾಮನವಮಿ ಸಂಭ್ರಮದಿಂದ ಆಚರಿಸಲಾಗಿದೆ. ಇದೇ ಶುಭ ದಿನ ದೂರದರ್ಶನ ಹೊಸ ಲೋಗೋ ಅನಾವರಣ ಮಾಡಿದೆ. ಕೇಸರಿ ಬಣ್ಣದ ಹೊಸ ಲೋಗೋ ಹೊಸ ಸಂಚಲನ ಸೃಷ್ಟಿಸಿದೆ. ಲೋಗೋ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಕೇವಲ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಕೆಂಪು ಬಣ್ಣದಲ್ಲಿದ್ದ ಡಿಡಿ ನ್ಯೂಸ್ ಇದೀಗ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ.
11:22 AM Apr 18, 2024 IST | Ashitha S

ನವದೆಹಲಿ: ದೇಶಾದ್ಯಂತ ರಾಮನವಮಿ ಸಂಭ್ರಮದಿಂದ ಆಚರಿಸಲಾಗಿದೆ. ಇದೇ ಶುಭ ದಿನ ದೂರದರ್ಶನ ಹೊಸ ಲೋಗೋ ಅನಾವರಣ ಮಾಡಿದೆ. ಕೇಸರಿ ಬಣ್ಣದ ಹೊಸ ಲೋಗೋ ಹೊಸ ಸಂಚಲನ ಸೃಷ್ಟಿಸಿದೆ. ಲೋಗೋ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಕೇವಲ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಕೆಂಪು ಬಣ್ಣದಲ್ಲಿದ್ದ ಡಿಡಿ ನ್ಯೂಸ್ ಇದೀಗ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ.

Advertisement

ಹೊಸ ಅವತಾರ, ಹೊಸ ಲೋಗೋ ಕುರಿತು ಡಿಡಿ ನ್ಯೂಸ್ ಮಹತ್ವದ ಪೋಸ್ಟ್ ಮಾಡಿದೆ. ವಿಡಿಯೋ ಪೋಸ್ಟ್ ಮಾಡಿರು ದೂರದರ್ಶನ ನ್ಯೂಸ್, ನಮ್ಮ ಮೌಲ್ಯಗಳು ಒಂದೇ, ಆದರೆ ಹೊಸ ಅವತಾರದಲ್ಲಿ ಬಂದಿದ್ದೇವೆ. ಹಿಂದೆಂದೂ ಇಲ್ಲದಂತ ಸುದ್ದಿ ಪ್ರಯಾಣಕ್ಕಾಗಿ ಸಿದ್ದರಾಗಿ. ಹೊಸ ಡಿಡಿ ನ್ಯೂಸ್ ಅನುಭವಿಸಿ ಎಂದು ಡಿಡಿ ನ್ಯೂಸ್ ಹೇಳಿದೆ. ನಿಖರತೆ, ಸತ್ಯ, ಸಂವೇದನೆಯೊಂದಿಗೆ ಡಿಡಿ ನ್ಯೂಸ್. ಡಿಡಿ ನ್ಯೂಸ್‌ನಲ್ಲಿ ಬಂದರೆ ಅದು ಸತ್ಯ ಎಂದು ಡಿಡಿ ನ್ಯೂಸ್ ಹೇಳಿದೆ.

ನಾವು ಹೊಸ ಅವತಾರದಲ್ಲಿ ಬಂದಿದ್ದೇವೆ, ಹೊಸ ಲೋಗೋ ಅನಾವರಣ ಮಾಡಿದ್ದೇವೆ. ಆದರೆ ನಮ್ಮ ಮೌಲ್ಯಗಳು ಬದಲಾಗುವುದಿಲ್ಲ. ನಮ್ಮ ಹೊಸ ಪಯಣದಲ್ಲಿ ಪಾಲ್ಗೊಳ್ಳಿ, ಹಿಂದೆಂದೂ ಕಾಣದ ಡಿಡಿ ನ್ಯೂಸ್ ಸುದ್ದಿಯನ್ನು ಅನುಭವಿಸಿ ಎಂದು ಡಿಡಿ ನ್ಯೂಸ್ ಹೇಳಿದೆ. ವಾಹಿನಿಯಲ್ಲಿನ ಲೋಗೋ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ ಸೇರಿದಂತೆ ಎಲ್ಲೆಡೆ ಲೋಗೋ ಬದಲಾಗಿದೆ.

Advertisement

ಡಿಡಿ ನ್ಯೂಸ್ ಹೊಸ ಲೋಗೋಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಡಿಡಿ ನ್ಯೂಸ್ ಹೊಸ ಲೋಗೋವನ್ನು ಸ್ವಾಗತಿಸಿದ್ದಾರೆ.

Advertisement
Tags :
dd-newsGOVERNMENTindiaKARNATAKANewsKarnatakaramanavami
Advertisement
Next Article