For the best experience, open
https://m.newskannada.com
on your mobile browser.
Advertisement

ಪೋಕ್ಸೋ ಪ್ರಕರಣದಡಿ ಬಂಧಿತ ಆರೋಪಿ ದಿಡೀರ್‌ ಸಾವು : ತನಿಖೆಗೆ ಅಗ್ರಹ

ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದ ವ್ಯಕ್ತಿ ಇದೀಗ ಜೈಲಿನಲ್ಲೆ ಸಾವನಪ್ಪಿದ್ದಾನೆ ಈ ಘಟನೆ ಜಾವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ರಮೇಶ್ (36) ಮೃತವ್ಯಕ್ತಿಯಾಗಿದ್ದು ಈತನ ಸಂಬಂಧಿಕರು ಈ ಕುರಿತು ಹಚ್ಚಿನ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
02:54 PM Apr 04, 2024 IST | Nisarga K
ಪೋಕ್ಸೋ ಪ್ರಕರಣದಡಿ ಬಂಧಿತ ಆರೋಪಿ ದಿಡೀರ್‌ ಸಾವು   ತನಿಖೆಗೆ ಅಗ್ರಹ
ಪೋಕ್ಸೋ ಪ್ರಕರಣದಡಿ ಬಂಧಿತ ಆರೋಪಿ ದಿಡೀರ್‌ ಸಾವು : ತನಿಖೆಗೆ ಅಗ್ರಹ

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದ ವ್ಯಕ್ತಿ ಇದೀಗ ಜೈಲಿನಲ್ಲೆ ಸಾವನಪ್ಪಿದ್ದಾನೆ ಈ ಘಟನೆ ಜಾವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ರಮೇಶ್ (36) ಮೃತವ್ಯಕ್ತಿಯಾಗಿದ್ದು ಈತನ ಸಂಬಂಧಿಕರು ಈ ಕುರಿತು ಹಚ್ಚಿನ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ ರಮೇಶ್ (36) ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದನು. ಮೊನ್ನೆಯಷ್ಟೇ ಕುಟುಂಬಸ್ಥರಿಗೆ ಕರೆ ಮಾಡಿ ಮಾತನಾಡಿದ್ದನಂತೆ. ಯುಗಾದಿ ಹಬ್ಬದ ಬಳಿಕ ಭೇಟಿಗೆ ಬನ್ನಿ ಎಂದು ತಾಯಿ, ತಂಗಿ ಮತ್ತು ಸಹೋದರರಿಗೆ ಹೇಳಿದ್ದನಂತೆ. ಆದ್ರೆ, ನಿನ್ನೆ(ಏ.03) ಬೆಳಗಿನ ಜಾವ ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತ್ ಪಾಟೀಲ್ ಕರೆ ಮಾಡಿ ರಮೇಶ್ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೀಗಾಗಿ ಜೈಲಿನಲ್ಲಿ ಏನೋ ಮೋಸ ನಡೆದಿದೆ ಎಂದು ರಮೇಶ್‌ ಸಹೋದರಿ ಮತ್ತು ಸಂಧಿಕರು ಆರೋಪಿಸಿದ್ದು ಈ ಕುರಿತು ಹೆಚ್ಚಿ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕಿದೆ.

Advertisement

Advertisement
Tags :
Advertisement