For the best experience, open
https://m.newskannada.com
on your mobile browser.
Advertisement

ಕುಂದಾಪುರ ಸರ್ವಿಸ್ ರಸ್ತೆಯಲ್ಲಿ ಮರಣ ಗುಂಡಿ; ಉರುಳಿ ಬೀಳುತ್ತಿರುವ ದ್ವಿಚಕ್ರ ಸವಾರರು

ಕುಂದಾಪುರ ನಗರದ ಹಂಗಳೂರು - ಮೂರುಕೈ ಬಳಿಯ ಸರ್ವಿಸ್ ರಸ್ತೆಯಲ್ಲಿ ಸತತ ಸುರಿಯುತ್ತಿರುವ ಜಡಿ ಮಳೆಗೆ ಕಂದಕವೊಂದು ಸೃಷ್ಟಿಯಾಗಿದೆ.
04:56 PM Jul 10, 2024 IST | Chaitra Kulal
ಕುಂದಾಪುರ ಸರ್ವಿಸ್ ರಸ್ತೆಯಲ್ಲಿ ಮರಣ ಗುಂಡಿ  ಉರುಳಿ ಬೀಳುತ್ತಿರುವ ದ್ವಿಚಕ್ರ ಸವಾರರು

ಉಡುಪಿ: ಕುಂದಾಪುರ ನಗರದ ಹಂಗಳೂರು - ಮೂರುಕೈ ಬಳಿಯ ಸರ್ವಿಸ್ ರಸ್ತೆಯಲ್ಲಿ ಸತತ ಸುರಿಯುತ್ತಿರುವ ಜಡಿ ಮಳೆಗೆ ಕಂದಕವೊಂದು ಸೃಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಸರತಿ ಯಂತೆ ಬಿದ್ದು ಗಾಯಗೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮೌನ ವಹಿಸಿರುವುದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸ್ಥಳೀಯ ಸರ್ವಿಸ್ ರಸ್ತೆ ಮಳೆಗಾಲದಲ್ಲಿ ನೀರು ತುಂಬಿ ಸಾಕ್ಷಾತ್ ನದಿಯಂತೆ ಕಂಡು ಬರುತ್ತದೆ. ವಾಹನ ಸವಾರರು ಅದರಲ್ಲಿಯೇ ವಾಹನ ಚಲಾಯಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದರು.

ರ

Advertisement

ಆದರೆ ಇದೀಗ ಸರ್ವಿಸ್ ರಸ್ತೆಯಲ್ಲಿ ಭಾರಿ ಆಳದ ಕಂದಕಗಳು ಸ್ರಷ್ಟಿಯಾಗಿ ನೀರು ತುಂಬಿಕೊಂಡಿದೆ. ಇದರ ಬಗ್ಗೆ ಅರಿವಿಲ್ಲದ ವಾಹನ ಸವಾರರು ಕಂದಕ ದಲ್ಲಿ ಉರುಳಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರ ಸಹಿತ ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ. ಹೆಚ್ಚಿನ ದುರಂತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚತ್ತು ಶೀಘ್ರ ಕ್ರಮಕೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Tags :
Advertisement