For the best experience, open
https://m.newskannada.com
on your mobile browser.
Advertisement

ಆಫ್ಘಾನಿಸ್ತಾನದಲ್ಲಿ ಮರಣದಂಡನೆ; ಕ್ರೀಡಾಂಗಣದಲ್ಲಿ ತಾಲಿಬಾನ್‌ ಶೈಲಿ ಶಿಕ್ಷೆ

ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರು ಕೊಲೆಗಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಘಟನೆ ತಾಲಿಬಾನ್‌ ಆಡಳಿತದಲ್ಲಿ ನಡೆದಿದೆ.
09:00 PM Feb 22, 2024 IST | Maithri S
ಆಫ್ಘಾನಿಸ್ತಾನದಲ್ಲಿ ಮರಣದಂಡನೆ  ಕ್ರೀಡಾಂಗಣದಲ್ಲಿ ತಾಲಿಬಾನ್‌ ಶೈಲಿ ಶಿಕ್ಷೆ

ಅಫ್ಘಾನಿಸ್ತಾನ್‌: ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರು ಕೊಲೆಗಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಘಟನೆ ತಾಲಿಬಾನ್‌ ಆಡಳಿತದಲ್ಲಿ ನಡೆದಿದೆ.

Advertisement

ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದ್ಜಾದಾ ಸಹಿ ಮಾಡಿದ ಡೆತ್ ವಾರಂಟ್ ಅನ್ನು ಸುಪ್ರೀಂಕೋರ್ಟ್ ಅಧಿಕಾರಿ ಗಟ್ಟಿಯಾಗಿ ಓದಿದ ನಂತರ ಘಜ್ನಿ ನಗರದಲ್ಲಿ ಇಬ್ಬರು ಅಪರಾಧಿಗಳ ಹಿಂಭಾಗಕ್ಕೆ ಅನೇಕ ಗುಂಡು ಹಾರಿಸಿದ ನಂತರ ಗಲ್ಲಿಗೇರಿಸಲಾಯಿತು ಎಂದು ಎಎಫ್‌ಪಿ ವರದಿ ಮಾಡಿದೆ.

ಎರಡು ವರ್ಗಳ ವಿಚಾರಣೆಯ ನಂತರ ಶಿಕ್ಷೆಯ ಆದೇಶಕ್ಕೆ ಸಹಿ ಹಾಕಲಾಗಿದೆ ಎಂದು ಸುಪ್ರೀಂಕೋರ್ಟ್ ಅಧಿಕಾರಿ ಅತೀಕುಲ್ಲಾ ದರ್ವಿಶ್ ಹೇಳಿದ್ದಾರೆ.

Advertisement

ಮರಣದಂಡನೆಯನ್ನು ವೀಕ್ಷಿಸಲು ಸಾವಿರಾರು ಪುರುಷರು ಜಮಾಯಿಸಿದ್ದು, ಶಿಕ್ಷೆಗೊಳಗಾದವರ ಕುಟುಂಬದವರು ಉಪಸ್ಥಿತರಿದ್ದರು.

ತಾಲಿಬಾನ್‌ ಆಡಳಿತದ ಚುಕ್ಕಾಣಿ ಹಿಡಿಯುವ ಮೊದಲು ದೇಶದಲ್ಲಿ ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಿಸಲು ವಿದೇಶಿ ಬೆಂಬಲಿತ ಸರ್ಕಾರಗಳು ಪ್ರಯತ್ನಿಸಿದ್ದವು.

ತಾಲಿಬಾನ್‌ ಆಡಳಿತದಲ್ಲಿ ಮರಣದಂಡನೆ ಸಾಮಾನ್ಯವಾಗಿದ್ದು, ಅಧಿಕಾರಕ್ಕೆ ಬಂದಾಗಿನಿಂದ ನೀಡಲಾದ ಮೂರನೆ ಅಥವ ನಾಲ್ಕನೆ ಮರಣದಂಡನೆ ಇದೆಂದು ಹೇಳಲಾಗಿದೆ.

Advertisement
Tags :
Advertisement