For the best experience, open
https://m.newskannada.com
on your mobile browser.
Advertisement

ಸೈಲೆಂಟ್‌ ಆಗಿ ಹೊಸ ಬಾಳಿಗೆ ಕಾಲಿಟ್ಟ ನಾಗಿಣಿ 'ದೀಪಿಕಾ ದಾಸ್‌'

ಕಿರುತೆರೆಯ ಎಲ್ಲರ ನೆಚ್ಚಿನ ನಟಿ ದೀಪಿಕಾ ದಾಸ್‌ ಈಗ ಅವರ ಅಭಿಮಾನಿಗಳಿಗೆ   ಒಂದು  ಗುಡ್‌ ನ್ಯೂಸ್‌ ನೀಡಿದ್ದಾರೆ. ಬಿಗ್‌ಬಾಸ್‌ ಬ್ಯೂಟಿ ಸೈಲೆಂಟ್‌ ಆಗಿ ಹಸೆಮಣೆ ಏರಿ ಅಭಿಮಾನಿ ಗಳಿಗೆ ಶಾಕ್‌ ಕೊಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
12:07 PM Mar 02, 2024 IST | Nisarga K
ಸೈಲೆಂಟ್‌ ಆಗಿ ಹೊಸ ಬಾಳಿಗೆ ಕಾಲಿಟ್ಟ ನಾಗಿಣಿ  ದೀಪಿಕಾ ದಾಸ್‌

ಕಿರುತೆರೆಯ ಎಲ್ಲರ ನೆಚ್ಚಿನ ನಟಿ ದೀಪಿಕಾ ದಾಸ್‌ ಈಗ ಅವರ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಬಿಗ್‌ಬಾಸ್‌ ಬ್ಯೂಟಿ ಸೈಲೆಂಟ್‌ ಆಗಿ ಹಸೆಮಣೆ ಏರಿ ಅಭಿಮಾನಿ ಗಳಿಗೆ ಶಾಕ್‌ ಕೊಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

Advertisement

ಕೃಷ್ಣ ರುಕ್ಮಿಣಿ ಮತ್ತು ನಾಗಿಣಿ ಸೀರಿಯಲ್‌ಗಳ ಮೂಲಕ ಎಲ್ಲರ ಮನ ಗೆದ್ದಿದ್ದರು. ನಂತರ ಬಿಗ್‌ಬಾಸ್‌ ನಲ್ಲಿ ತನ್ನ ಆಟದ ಮೂಲಕ ಕೂಡ ನಾಡಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.ಇದೀಗ ಬಿಗ್‌ಬಾಸ್‌ ಬೆಡಗಿ ಸದ್ದಿಲ್ಲದೆ ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿಯನ್ನು ನಟಿ ಮದುವೆ ಆಗಿದ್ದಾರೆ.

ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು. ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿದ್ದಾರೆ. ಮೂರು ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ‘ಮಿಸ್ಟರ್ & ಮಿಸೆಸ್ ಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ದೀಪಿಕಾ ಹೊಸ ಬಾಳಿಗೆ ಶುಭವಾಗಲಿ ಎಂದು ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಸೇರಿದಂತೆ ಹಲವರು ಶುಭಕೋರಿದ್ದಾರೆ.

Advertisement

Advertisement
Tags :
Advertisement