ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದೆಹಲಿಯ ಸಫೀನಾ ಹುಸೇನ್‌ಗೆ ₹ 4.16 ಕೋಟಿಯ 'ವೈಸ್‌' ಪ್ರಶಸ್ತಿ ಗರಿ

ಎಜುಕೇಟ್ ಗರ್ಲ್ಸ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ 'ವೈಸ್‌' (ವರ್ಲ್ಡ್‌ ಇನ್ನೊವೇಷನ್‌ ಸಮ್ಮಿಟ್‌ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.
10:40 PM Dec 03, 2023 IST | Ashitha S

ನವದೆಹಲಿ: 'ಎಜುಕೇಟ್ ಗರ್ಲ್ಸ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ 'ವೈಸ್‌' (ವರ್ಲ್ಡ್‌ ಇನ್ನೊವೇಷನ್‌ ಸಮ್ಮಿಟ್‌ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.

Advertisement

ಭಾರತದ ವಿವಿಧ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 14 ಲಕ್ಷ ಬಾಲಕಿಯರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದರಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕತಾರ್‌ ಫೌಂಡೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಕೆಲ ದಿನಗಳ ಹಿಂದೆ ದೋಹಾದಲ್ಲಿ ನಡೆದಿದ್ದ 'ವೈಸ್‌'ನ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Advertisement

ಸಫೀನಾ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಭಾರತೀಯರು. ಹಿಂದೆ, ನಿರ್ಲಕ್ಷ್ಯಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರ್ಯಕ್ರಮಕ್ಕಾಗಿ 'ಪ್ರಥಮ್‌' ಸಹ ಸ್ಥಾಪಕ ಮಾಧವ್‌ ಚವಾಣ್‌ 2012ರಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

'16 ವರ್ಷಗಳ ಹಿಂದೆ 'ಎಜುಕೇಟ್‌ ಗರ್ಲ್ಸ್‌' ಸಂಸ್ಥೆ ಸ್ಥಾಪಿಸಿದೆ. ಆಗಿನ್ನೂ 'ಬೇಟಿ ಬಚಾವೊ, ಬೇಟಿ ಪಡಾವೊ' ಇರಲಿಲ್ಲ. ಶಿಕ್ಷಣ ವಂಚಿತ ಬಾಲಕಿಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದೇ ಉದ್ದೇಶವಾಗಿತ್ತು' ಎಂದು ಸಫೀನಾ ಹೇಳಿದರು.

Advertisement
Tags :
GOVERNMENTindiaLatestNewsNewsKannadaನವದೆಹಲಿಬೆಂಗಳೂರುಸಫೀನಾ ಹುಸೇನ್‌
Advertisement
Next Article