For the best experience, open
https://m.newskannada.com
on your mobile browser.
Advertisement

ರಾಜ್ಯದಲ್ಲಿ ಒಂದೇ ದಿನ 175 ಜನರಲ್ಲಿ ಡೆಂಗ್ಯೂ ಪತ್ತೆ : ಓರ್ವ ಬಾಲಕ ಸಾವು

ರಾಜ್ಯದಲ್ಲಿ ಶನಿವಾರ ಒಂದೇ ದಿನ 175 ಜನರಿಗೆ ಡೆಂಗ್ಯೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಿಗೆ ಡೆಂಗ್ಯೂ ದೃಢಪಟ್ಟಿದೆ.
10:20 AM Jul 07, 2024 IST | Nisarga K
ರಾಜ್ಯದಲ್ಲಿ ಒಂದೇ ದಿನ 175 ಜನರಲ್ಲಿ ಡೆಂಗ್ಯೂ ಪತ್ತೆ   ಓರ್ವ ಬಾಲಕ ಸಾವು
ರಾಜ್ಯದಲ್ಲಿ ಒಂದೇ ದಿನ 175 ಜನರಲ್ಲಿ ಡೆಂಗ್ಯೂ ಪತ್ತೆ : ಓರ್ವ ಬಾಲಕ ಸಾವು

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ 175 ಜನರಿಗೆ ಡೆಂಗ್ಯೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಡೆಂಗ್ಯೂ ಸೋಂಕಿತ 352 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 127 ಸೋಂಕಿತರು ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ ಇದುವರೆಗೆ 7 ಸಾವಿರ ಜನರಿಗೆ ಡೆಂಗ್ಯೂ ಸೋಂಕು ತಗುಲಿದೆ.

Advertisement

ಇನ್ನು 24 ಗಂಟೆಯಲ್ಲಿ ರಾಜ್ಯದಲ್ಲಿ 175 ಜನರಲ್ಲಿ ಡೆಂಗ್ಯೂ ಕೇಸ್ ವರದಿಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ 1908 ಹೊಸ ಪ್ರಕರಣ ಧೃಡಪಟ್ಟಿದೆ. ಇನ್ನು ಡೆಂಗ್ಯೂನಿಂದ ಅಂಜನಾಪುರದ 11 ವರ್ಷದ ಬಾಲಕ ಗಗನ್ ಸಾವನ್ನಪ್ಪಿದ್ದಾನೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಗನ್ ಚಿಕಿತ್ಸೆ ಫಲಿಸದೇ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ.

Advertisement
Advertisement
Tags :
Advertisement