ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡೆನ್ಮಾರ್ಕ್ ರಾಣಿ ಮಾರ್ಗರೇಟ್‌ ಪದತ್ಯಾಗ: ರಾಜನಾಗಿ ಪುತ್ರ ಅಧಿಕಾರಕ್ಕೆ

ಡೆನ್ಮಾರ್ಕ್‌ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ನಂತರ ಹೊಸ ಯುಗ ಆರಂಭವಾಗಿದೆ.
06:34 PM Jan 15, 2024 IST | Ashitha S

ಡೆನ್ಮಾರ್ಕ್‌: ಡೆನ್ಮಾರ್ಕ್‌ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ನಂತರ ಹೊಸ ಯುಗ ಆರಂಭವಾಗಿದೆ.

Advertisement

ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಅಭೂತಪೂರ್ವ ಗಳಿಗೆಗೆ ಕೋಪನ್‌ಹೇಗನ್‌ನ ಕ್ರಿಸ್ತಿಯಾನ್ಸ್‌ಬರ್ಗ್‌ ಸ್ಕ್ವೈರ್‌ನಲ್ಲಿ 100,000 ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿ ಆಗಮಿಸಿದ್ದರು.

ಕ್ರಿಸ್ತಿಯಾನ್ಸ್‌ಬರ್ಗ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇಟ್‌, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕುವ ಮೂಲಕ ತನ್ನ 52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗಕ್ಕೆ ಅಂತ್ಯ ಹಾಡಿದರು. ಬಳಿಕ ರಾಜನಾಗಿ ಅವರ 55 ವರ್ಷ ವಯಸ್ಸಿನ ಪುತ್ರ ಫೆಡ್ರಿಕ್‌ ಅವರ ಅಧಿಕಾರವಧಿ ಆರಂಭಗೊಂಡಿತು.

Advertisement

ಫೆಡ್ರಿಕ್ ಅವರು ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿದ್ದನ್ನು ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಅರಮನೆಯ ಮಹಡಿಯಲ್ಲಿ ಘೋಷಣೆ ಮಾಡಿದರು.

Advertisement
Tags :
indiaLatestNewsNewsKannadaಡೆನ್ಮಾರ್ಕ್ ರಾಣಿ
Advertisement
Next Article