ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾಲ್ಡೀವ್ಸ್‌ನಿಂದ 43 ಮಂದಿ ಭಾರತೀಯರ ಗಡಿಪಾರು !

ವೀಸಾ ನಿಯಮ ಉಲ್ಲಂಘನೆ, ಮಾದಕವಸ್ತು ಅಕ್ರಮ ಮಾರಾಟದಂಥ ಆರೋಪಗಳಿಗೆ ಸಂಬಂಧಿಸಿ 186 ವಿದೇಶಿಯರನ್ನು ಮಾಲ್ಡೀವ್ಸ್‌ ಗಡಿಪಾರು ಮಾಡಿದೆ. ಅವರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮವೊಂದು ವರದಿ ಮಾಡಿದೆ.
09:57 AM Feb 15, 2024 IST | Ashitha S

ಮಾಲ್ಡೀವ್ಸ್‌: ವೀಸಾ ನಿಯಮ ಉಲ್ಲಂಘನೆ, ಮಾದಕವಸ್ತು ಅಕ್ರಮ ಮಾರಾಟದಂಥ ಆರೋಪಗಳಿಗೆ ಸಂಬಂಧಿಸಿ 186 ವಿದೇಶಿಯರನ್ನು ಮಾಲ್ಡೀವ್ಸ್‌ ಗಡಿಪಾರು ಮಾಡಿದೆ. ಅವರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮವೊಂದು ವರದಿ ಮಾಡಿದೆ.

Advertisement

ಗಡಿಪಾರಾದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶೀಯರು (83 ಮಂದಿ). ನಂತರದ ಸ್ಥಾನದಲ್ಲಿ ಭಾರತ, ಶ್ರೀಲಂಕಾ (25), ನೇಪಾಳದ (8) ಪ್ರಜೆಗಳಿದ್ದಾರೆ. ಗಡಿಪಾರು ಮಾಡಿರುವ ದಿನಾಂಕ ಇನ್ನೂ ತಿಳಿದುಬಂದಿಲ್ಲ ಎಂದು 'ಅಧಾಧು' ಮಾಧ್ಯಮ ವರದಿ ಮಾಡಿದೆ.

ಈ ಕುರಿತು ಮಾಲ್ಡೀವ್ಸ್‌ನ ಆಂತರಿಕ ಭದ್ರತಾ ಸಚಿವ ಅಲಿ ಇಹುಸನ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭದ್ರತಾ ಸಚಿವಾಲಯ ಮತ್ತು ಅರ್ಥ ಸಚಿವಾಲಯ ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದರು.

Advertisement

ವಿದೇಶಿಗರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹಲವಾರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಸಮರ್ಪಕವಾದ ದಾಖಲೆಗಳು ಮತ್ತು ಪಾಸ್‌ಪೋರ್ಟ್‌ ಹೊಂದಿರುವ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement
Tags :
BUSINESSindiaLatestNewsNewsKannadaTravellersಗಡಿಪಾರುಮಾಲ್ಡೀವ್ಸ್
Advertisement
Next Article