For the best experience, open
https://m.newskannada.com
on your mobile browser.
Advertisement

ವಿಕಸಿತ ಭಾರತ- 2047 ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸ

ಏ. 29 ರಂದು ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದಿಂದ ವಿಕಸಿತ ಭಾರತ – 2047 ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಕಾರರಾದ ಶ್ರೀ ಶ್ರೀಕಾಂತ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸವನ್ನು ನೆರವೇರಿಸಿದರು.
05:30 PM Apr 30, 2024 IST | Ashitha S
ವಿಕಸಿತ ಭಾರತ  2047 ಡಾ ಎನ್ ಎಸ್ ಎ ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸ

ಮಂಗಳೂರು: ಏ. 29 ರಂದು ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದಿಂದ ವಿಕಸಿತ ಭಾರತ – 2047 ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಕಾರರಾದ ಶ್ರೀ ಶ್ರೀಕಾಂತ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸವನ್ನು ನೆರವೇರಿಸಿದರು.

Advertisement

ಭಾರತ ಸರ್ಕಾರ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇಂದು ಭಾರತವನ್ನು ಅಭಿವೃದ್ದಿಯ ಪಥದತ್ತ ಸಾಗಿಸುತ್ತಿದೆ ಹಾಗೂ ಈ ಯೋಜನೆಗಳು ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿವೆ ಎಂದರು. ಗಂಗಾ ನದಿಯನ್ನು ಶುದ್ದ ಗೊಳಿಸುವ ನಮಾಮಿ ಗಂಗೆ ಯೋಜನೆ, ಇದರಿಂದಾಗಿ ಇಂದು ಗಂಗೆಯಲ್ಲಿನ ಪಿಎಸ್ ಮಟ್ಟ ಇವತ್ತು 3 ಕ್ಕೆ ಇಳಿದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಯೋಜನೆಗಳು ದೇಶದಾದ್ಯಂತ ಸಂಪರ್ಕ ಕ್ರಾಂತಿಯನ್ನು ಉಂಟುಮಾಡಿದೆ, ಭಾರತಿಯ ಸೇನೆಯ ಸರ್ಜಿಕಲ್  ಸ್ಟ್ರೈಕ್, ಇವ್ಯಾಕ್ಯುಯೇಷನ್ ಗಳು ಭದ್ರತೆಯ ಹೊಸ ಸವಾಲುಗಳಿಗೆ ಉತ್ತರಗಳನ್ನು ನೀಡಿದೆ. ಹಾಗೆಯೇ ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ ಯಶಸ್ಸುಗಳು ಕೂಡ ಜಗತ್ತು ಭಾರತದತ್ತ ತಿರುಗುವಂತೆ ಮಾಡಿದೆ ಎಂದರು.
Ac (1)

Advertisement

ಭಾರತ ಈ ರೀತಿ ಅನೇಕ ರಂಗದಲ್ಲಿ ಅಭಿವೃದ್ದಿಯನ್ನು ಸಾಧಿಸುತ್ತಿದ್ದು ಇದು ಜಗತ್ತಿನಲ್ಲಿ ಭಾರತ ಪ್ರಾಬಲ್ಯ ಸಾಧಿಸಬಾರದು ಭಾರತವು ಪ್ರೇರಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ವೀಣಾ ಕುಮಾರಿ ಬಿ.ಕೆ. ಇವರು ಮಾತನಾಡಿ ಹೋರಾಟ ಕೇವಲ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ , ಅಭಿವೃದ್ದಿಗಾಗಿಯೂ ನಾವು ಹೋರಾಟದ ಮನೋಭಾವವನ್ನು ರೂಢಿಸಿಕೊಳ್ಳಬೇಕು, ಯುವಜನತೆ ತಮ್ಮ ಅಭ್ಯೂದಯದ ಜೊತೆಗೆ ದೇಶದ ಹಿತಕ್ಕಾಗಿ ಕೂಡ ಯೋಚಿಸುವದನ್ನು ಕಲಿಯಬಬೇಕು ಎಂದು ತಿಳಿಸಿದರು.
V

ಕಾರ್ಯಕ್ರಮದಲ್ಲಿ ಅಂತಮ ವರ್ಷದ ವಿದ್ಯಾರ್ಥಿಗಳು, ಅಧ್ಯಾಪಕರು ಉಪಸ್ಥಿತರಿದ್ದರು ಉಪನ್ಯಾಸಕ ಶ್ರೀ ನಾಯಕ್ ಚಿನ್ಮಯ್ ಸದಾನಂದ ಸ್ವಾಗತಿಸಿದರು, ಉಪನ್ಯಾಸಕಿ ಕುಮಾರಿ ದೃಷ್ಟಿ ವಿ ಬಾಳಿಗ ವಂದಿಸಿದರು, ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಕಾರ್ಯಕ್ರಮ
ನಿರೂಪಿಸಿದರು.

Advertisement
Tags :
Advertisement