For the best experience, open
https://m.newskannada.com
on your mobile browser.
Advertisement

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಅಥ್ಲೀಟ್‌ ದೇವೇಂದ್ರ ಝಜಾರಿಯಾಗೆ ಬಿಜೆಪಿ ಟಿಕೆಟ್

ಲೋಕಸಭೆ ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆ ಪಕ್ಷಗಳು ಅಭ್ಯರ್ಥಿಗಳ ಹೆಸರುಗಳನ್ನು ಹಂತ ಹಂತವಾಗಿ ಘೋಷಣೆ ಮಾಡುತ್ತಿದೆ. ಇನ್ನೊ ಬಿಜೆಪಿ ನಿನ್ನೆ (ಮಾ. 2) ರಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿವಿಧ ರಾಜ್ಯಗಳ 195 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
06:53 PM Mar 03, 2024 IST | Gayathri SG
ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಅಥ್ಲೀಟ್‌ ದೇವೇಂದ್ರ ಝಜಾರಿಯಾಗೆ ಬಿಜೆಪಿ ಟಿಕೆಟ್

ಲೋಕಸಭೆ ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆ ಪಕ್ಷಗಳು ಅಭ್ಯರ್ಥಿಗಳ ಹೆಸರುಗಳನ್ನು ಹಂತ ಹಂತವಾಗಿ ಘೋಷಣೆ ಮಾಡುತ್ತಿದೆ. ಇನ್ನೊ ಬಿಜೆಪಿ ನಿನ್ನೆ (ಮಾ. 2) ರಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿವಿಧ ರಾಜ್ಯಗಳ 195 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

Advertisement

ಪ್ರಕಟಗೊಂಡ ಪಟ್ಟಿಯಲ್ಲಿ ಕ್ರೀಡಾ ಲೋಕದ ಸಾಧಕ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ದೇವೇಂದ್ರ ಝಜಾರಿಯಾ ಹೆಸರು ಇದೆ. ಇವರು ರಾಜಸ್ಥಾನದ ಚುರು ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.

ಪ್ಯಾರಾ ಗೇಮ್ಸ್‌ನಲ್ಲಿ ಇವರು ದೇಶಕ್ಕಾಗಿ ಆಡಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. 2004ರಲ್ಲಿ ನಡೆದ ಅಥೆನ್ಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಪದಕ ಜಯಿಸಿದ್ದ ಝಜಾರಿಯಾ, ನಂತರ ಜಾವೆಲಿನ್‌ನಲ್ಲಿ 62.15 ಮೀಟರ್‌ ದೂರ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಅಥೆನ್ಸ್ ಮಾತ್ರವಲ್ಲದೆ ಝಜಾರಿಯಾ, 2016ರಲ್ಲಿ ನಡೆದ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೆ ಅದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಇದಲ್ಲದೆ 2020 ರಲ್ಲಿ ನಡೆದ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಝಜಾರಿಯಾ ಗೆದ್ದಿದ್ದಾರೆ.

Advertisement

Advertisement
Tags :
Advertisement