For the best experience, open
https://m.newskannada.com
on your mobile browser.
Advertisement

ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಡೆವಿಲ್ ಸರ್ಪ್ರೈಸ್

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಗೆ ಮೊತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ ದರ್ಶನ್. ಅವರ ಹೊಸ ಸಿನಿಮಾದ ಫಸ್ಟ್​ ಲುಕ್ ರಿಲೀಸ್ ಆಗಿದೆ.
08:19 AM Feb 16, 2024 IST | Ashika S
ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಡೆವಿಲ್ ಸರ್ಪ್ರೈಸ್

ಬೆಂಗಳೂರು: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಗೆ ಮೊತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ ದರ್ಶನ್. ಅವರ ಹೊಸ ಸಿನಿಮಾದ ಫಸ್ಟ್​ ಲುಕ್ ರಿಲೀಸ್ ಆಗಿದೆ.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ರು. ಚಳಿಯನ್ನೂ ಲೆಕ್ಕಿಸದೇ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಹಾರೈಕೆ ತಿಳಿಸಿದ್ದರು.

ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದ ಫಸ್ಟ್ ಲುಕ್ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯ್ತು‌. ಚಾಲೆಂಜಿಂಗ್ ಸ್ಟಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಜೈಕಾರ ಕೂಗಿದರು.

Advertisement

ಬೆಳಗ್ಗೆಯೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ. ಉಳಿದಂತೆ ದರ್ಶನ್ ನೋಡಲು ಆಗಮಿಸಲಿರೋ ಸಾವಿರಾರು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಏನಂದ್ರೆ ಈ ವರ್ಷವೂ ಯಾವುದೇ ಕೇಕ್, ಹಾರ, ತುರಾಯಿ ತರದಂತೆ ಅಭಿಮಾನಿಗಳಿಗೆ ದಚ್ಚು ಮನವಿ ಮಾಡಿದ್ದರು.  ಬದಲಿಗೆ ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಸಹಾಯವಾಗುವಂತೆ ಅಕ್ಕಿ, ಬೇಳೆ, ಎಣ್ಣೆ ತರಲು ತಿಳಿಸಿದ್ದರು.  ಅದರಂತೆ ಫ್ಯಾನ್ಸ್ ದವಸ- ಧಾನ್ಯಗಳನ್ನು ತಂದಿದ್ದಾರೆ.

Advertisement
Tags :
Advertisement