For the best experience, open
https://m.newskannada.com
on your mobile browser.
Advertisement

ಮನೋಜ್ ಅಭಿನಯದ ʻಧರಣಿʼ  ಸಿನಿಮಾದ ಪೋಸ್ಟರ್ ಬಿಡುಗಡೆ

ನಾಯಕನಟ ಮನೋಜ್ ಅವರ ಹುಟ್ಟುಹಬ್ಬಕ್ಕೆ ʻಧರಣಿʼ  ಸಿನಿಮಾದ ಕಲಾತ್ಮಕ ಪೋಸ್ಟರ್ ಬಿಡುಗಡೆಗೊಂಡಿದೆ.
02:43 PM Jan 13, 2024 IST | Ashika S
ಮನೋಜ್ ಅಭಿನಯದ ʻಧರಣಿʼ  ಸಿನಿಮಾದ ಪೋಸ್ಟರ್ ಬಿಡುಗಡೆ

ಬೆಂಗಳೂರು: ನಾಯಕನಟ ಮನೋಜ್ ಅವರ ಹುಟ್ಟುಹಬ್ಬಕ್ಕೆ ʻಧರಣಿʼ  ಸಿನಿಮಾದ ಕಲಾತ್ಮಕ ಪೋಸ್ಟರ್ ಬಿಡುಗಡೆಗೊಂಡಿದೆ.

Advertisement

ಒಂದು ಕಡೆ ಹೀರೋ ಮನೋಜ್, ಮತ್ತೊಂದು ಬದಿಯಲ್ಲಿ ಕಾಳಗಕ್ಕೆ ಅಣಿಯಾದ ಕೋಳಿಯನ್ನು ಹೊಂದಿರುವ ಈ ಪೋಸ್ಟರ್ ವಿನ್ಯಾಸ ಎಲ್ಲರ ಗಮನ ಸೆಳೆದಿದೆ. ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಟಿ.ಎಫ್. ಹಾದಿಮನಿ ಈ ಪೋಸ್ಟರನ್ನು ರಚಿಸಿದ್ದಾರೆ.

ಎ ಕ್ಯೂಬ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ʻಧರಣಿʼ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿದೆ. ಸುಧೀರ್ ಶ್ಯಾನುಭೋಗ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Advertisement

ಮೇಲ್ನೋಟಕ್ಕೆ ಕೋಳಿ ಪಂದ್ಯದ ಸುತ್ತ ತೆರೆದುಕೊಳ್ಳುವ ಕಥೆ ಈ ಚಿತ್ರದಲ್ಲಿದ್ದರೂ, ಈ ವರೆಗೆ ಯಾರೂ ಹೇಳದ ಅನೇಕ ವಿಚಾರಗಳು ಅಡಕಗೊಂಡಿವೆ.

ಈ ಚಿತ್ರದಲ್ಲಿ ಮನೋಜ್ ಗೆ  ನಾಯಕಿಯಾಗಿ ಹೊಸ ಪ್ರತಿಭೆ ರವೀಕ್ಷಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಸಂಪತ್ ಮೈತ್ರೇಯ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್, ಸ್ಪಂದನಾ ಪ್ರಸಾದ್, ಸತ್ಯರಾಜ್ ಮೊದಲಾದವರ ತಾರಾಗಣವಿದೆ.

ನೆಲದ ಕಥೆಯನ್ನೇ ಪ್ರಧಾನವಾಗಿರಿಸಿಕೊಂಡು ರೂಪುಗೊಳ್ಳುತ್ತಿರುವ ಸಿನಿಮಾ ಧರಣಿ.  ಇದರಲ್ಲಿ  ಬರೋಬ್ಬರಿ ಐದು ಫೈಟ್ಗಳನ್ನು ಹೊಂದಿದೆ. ಈ ಐದೂ ಸಾಹಸ ಸನ್ನಿವೇಶಗಳು ಒಂದಕ್ಕಿಂತಾ ಒಂದು ಭಿನ್ನವಾಗಿವೆ.

Advertisement
Tags :
Advertisement