ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಾಶಿವರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ವಿಧಿವಶ !

ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಅನಾರೋಗ್ಯದಿಂದ ಲತಾ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು
05:37 PM Mar 08, 2024 IST | Ashitha S

ಧರ್ಮಸ್ಥಳ:  ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.

Advertisement

ಲತಾ ಸುಮಾರು 50 ವರ್ಷಗಳಿಂದ ಧರ್ಮಸ್ಥಳ ಜಾತ್ರಾಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ.

ಸದ್ಯ ಲತಾ ಆನೆಯ ಅಂತ್ಯಸಂಸ್ಕಾರ ಇಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.

Advertisement

Advertisement
Tags :
indiaLatestNewsNewsKannadaಆನೆಮಂಗಳೂರುಲತಾ
Advertisement
Next Article