ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆದರ್ಶ ತತ್ವಕ್ಕೆ ಧರ್ಮಸ್ಥಳವೇ ಮಾದರಿ : ಡಾ. ಎಂ. ಆರ್. ವೆಂಕಟೇಶ್

ಲೋಕಸಂಗ್ರಹದಲ್ಲಿ ಮಾನಸಿಕ ಸಶಕ್ತಿಯ ದಾನಕ್ಕೆ ಮುನ್ನುಡಿ ಬರೆದ ಏಕೈಕ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು, ಲೇಖಕರು ಆದ ಡಾ.ಎಂ.ಆರ್.ವೆಂಕಟೇಶ್ ಅಭಿಪ್ರಾಯ ಪಟ್ಟರು.
11:39 AM Dec 12, 2023 IST | Ramya Bolantoor

ಧರ್ಮಸ್ಥಳ: ಲೋಕಸಂಗ್ರಹದಲ್ಲಿ ಮಾನಸಿಕ ಸಶಕ್ತಿಯ ದಾನಕ್ಕೆ ಮುನ್ನುಡಿ ಬರೆದ ಏಕೈಕ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು, ಲೇಖಕರು ಆದ ಡಾ.ಎಂ.ಆರ್.ವೆಂಕಟೇಶ್ ಅಭಿಪ್ರಾಯ ಪಟ್ಟರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೆÇೀತ್ಸವದ ಸಂದರ್ಭದಲ್ಲಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಸೋಮವಾರದಂದು ಜರುಗಿದ 91ನೇಯ ಸರ್ವಧರ್ಮ ಸಮ್ಮೇಳನದಲ್ಲಿ 'ಆಧುನಿಕ ಭಾರತ ಧರ್ಮ ಸಮನ್ವಯತೆ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

Advertisement

ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ತಾತ್ಕಾಲಿಕವಾಗಿ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಾಗ, ಆತನಿಗೆ ಸಾತ್ವಿಕ ಶಕ್ತಿಯಾಗಿ ನಿಂತಿದ್ದೇ ಸಕಾರಾತ್ಮಕ ಮಂಥನೆ. ಅಂತೆಯೇ, ಪ್ರಸ್ತುತ ಕಾಲಘಟ್ಟದಲ್ಲಿ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗುತ್ತಿರುವ ಜನಮಾನಸಕ್ಕೆ ಆತ್ಮವಿಶ್ವಾಸವೆಂಬ ಶಕ್ತಿಯನ್ನು ಧರ್ಮದ ಮುಖಾಂತರ ನೀಡುತ್ತಿರುವ ಕ್ಷೇತ್ರವೇ ಧರ್ಮಸ್ಥಳವೆಂದು ಹೇಳಿದರು.

USESCO ಕೂಡ ಧರ್ಮಸ್ಥಳದ ಕಾರ್ಯಸ್ವರೂಪಿ ಮಾದರಿಯನ್ನು ಅಳವಡಿಸಿಕೊಂಡು ಪ್ರಗತಿಯನ್ನು ಹೊಂದಲಿ. ಶಿಬಿ ಚಕ್ರವರ್ತಿ ತನ್ನನ್ನೇ ಆಹಾರವನ್ನಾಗಿ ಅರ್ಪಿಸಿದಂತೆ, ಮನುನೀತಿ ಚೋಳನು ಆಡಳಿತದಲ್ಲಿ ನೀತಿಯೇ ಪರಮಧರ್ಮವೆಂಬಂತೆ ಧರ್ಮಸ್ಥಳದ ಧರ್ಮಮಾರ್ಗ ವಿಶ್ವಕ್ಕೆ ಆದರ್ಶವಾಗಿದೆ ಎಂದು ಹೇಳಿದರು.

ಅಧ್ಯಾತ್ಮ ಮತ್ತು ವಿಜ್ಞಾನ ಪರಸ್ಪರ ವಿರೋಧವಲ್ಲ. ಅಧ್ಯಾತ್ಮವಿಲ್ಲದೇ ವಿಜ್ಞಾನವಿರದು, ವಿಜ್ಞಾನವಿಲ್ಲದೇ ಅಧ್ಯಾತ್ಮವಿರದು. ಈ ಶತಮಾನದಲ್ಲಿ ವಿಜ್ಞಾನದ ಜೊತೆಗೆ ಅಧ್ಯಾತ್ಮವೂ ನಮ್ಮ ದೇಶಕ್ಕೆ ಆರ್ಥಿಕ ಸಬಲತೆಯನ್ನು ನೀಡಲಿ. ಭಾರತದ ಷಡ್ದರ್ಶನಗಳು ಈ ಪುಣ್ಯಭೂಮಿಯ ಬಹುತ್ವದಲ್ಲಿನ ವೈವಿಧ್ಯತೆಗೆ ಹಿಡಿದ ಕನ್ನಡಿಯಾಗಿದೆ. ಧರ್ಮವನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮೆಲ್ಲರ ಸ್ವಧರ್ಮದ ಪಾತ್ರವೂ ಹಿರಿದಾಗಿದೆ ಎಂಬುದನ್ನು ಅರಿತು ಮುನ್ನಡೆಯೋಣ ಎಂದರು

ತುಮಕೂರಿನ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥಾಪಕಾರಾದ ಡಾ.ಗುರುರಾಜ್ ಕರ್ಜಗಿ ಉದ್ಘಾಟಿಸಿದರು. ವಿಭು ಅಕಾಡೆಮಿಯ ಸಂಸ್ಥಾಪಕ ಮುಖ್ಯಸ್ಥರಾದ ಡಾ.ವಿ.ಬಿ. ಆರತಿ ಮತ್ತು ಶ್ರೀ ಮಹ್ಮದ್ ಗೌಸ್ ಹವಾಲ್ದಾರ ಸೇರಿದಂತೆ ಇತರೆ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Advertisement
Tags :
KARNATAKALatestNewsಬೆಳ್ತಂಗಡಿಮಂಗಳೂರು
Advertisement
Next Article