For the best experience, open
https://m.newskannada.com
on your mobile browser.
Advertisement

"ಧೋನಿ ಎಂದರೆ ಎಮೋಷನ್": ಸೋಶಿಯಲ್‌ ಮೀಡಿಯಾದಲ್ಲಿ ಕ್ಯಾಪ್ಟನ್ ಕೂಲ್ ಟ್ರೆಂಡ್

ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್. ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
03:13 PM Mar 15, 2024 IST | Ashitha S
 ಧೋನಿ ಎಂದರೆ ಎಮೋಷನ್   ಸೋಶಿಯಲ್‌ ಮೀಡಿಯಾದಲ್ಲಿ ಕ್ಯಾಪ್ಟನ್ ಕೂಲ್ ಟ್ರೆಂಡ್

ಚೆನ್ನೈ: ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್. ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Advertisement

ಧೋನಿ ಕೂಡ ತಮ್ಮ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಒತ್ತಾಸೆಯಕ್ಕೆ ಮಣಿದು ತಮ್ಮ ಐಪಿಎಲ್​ ನಿವೃತ್ತಿಯನ್ನು ಕೂಡ ಮುಂದೂಡಿದ್ದರು. ಇದೀಗ 17ನೇ ಆವೃತ್ತಿಯ ಐಪಿಎಲ್​ಗಾಗಿ ಧೋನಿ ಚೆನ್ನೈಯಲ್ಲಿ ಬರದಿಂದ ಅಭ್ಯಾಸ ಆರಂಭಿಸಿದ್ದಾರೆ.

ಈ ಬಾರಿ ಧೋನಿ ಐಪಿಎಲ್​ ಟೂರ್ನಿಗೆ ವಿದಾಯದ ಹೇಳುವುದು ಈಗಾಗಲೇ ಖಚಿತವಾಗಿದೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಟೂರ್ನಿ ಆರಂಭಕ್ಕೂ ಮುನ್ನವೇ ಅವರ ಹಲವು ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಧೋನಿ ಸೋಶಿಯಲ್‌ ಮಿಡಿಯಾದಲ್ಲಿ ಫುಲ್‌​​ ಟ್ರೆಂಡ್​ ಆಗಿರಲಿದ್ದಾರೆ.

Advertisement

ಮಹೇಂದ್ರ ಸಿಂಗ್​ ಧೋನಿಯ ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

Advertisement
Tags :
Advertisement