For the best experience, open
https://m.newskannada.com
on your mobile browser.
Advertisement

ಮತ್ತೊಂದು ದಾಖಲೆ ಬರೆದ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ

ಐಪಿಎಲ್ ಇತಿಹಾಸದಲ್ಲಿ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕಳೆದ ದಿನ (ಏ.28) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಎಚ್​ ವಿರುದ್ಧ 78 ರನ್​ಗಳ ಅಂತರದಿಂದ ಸಿಎಸ್​ಕೆ ಭರ್ಜರಿ ಜಯ ಸಾಧಿಸಿತು.
09:58 AM Apr 29, 2024 IST | Ashitha S
ಮತ್ತೊಂದು ದಾಖಲೆ ಬರೆದ ಕೂಲ್‌ ಕ್ಯಾಪ್ಟನ್ ಎಂ ಎಸ್​  ಧೋನಿ

ಮುಂಬೈ: ಐಪಿಎಲ್ ಇತಿಹಾಸದಲ್ಲಿ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕಳೆದ ದಿನ (ಏ.28) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಎಚ್​ ವಿರುದ್ಧ 78 ರನ್​ಗಳ ಅಂತರದಿಂದ ಸಿಎಸ್​ಕೆ ಭರ್ಜರಿ ಜಯ ಸಾಧಿಸಿತು.

Advertisement

ಬಹಳ ರೋಚಕವಾಗಿ ಮೂಡಿಬಂದ ಈ ಮ್ಯಾಚ್​ನಲ್ಲಿ, ಚೆನ್ನೈ ತಂಡದ ಬೌಲಿಂಗ್ ದಾಳಿಗೆ ಸನ್​ರೈಸರ್ಸ್​ ಸಂಪೂರ್ಣ ತತ್ತರಿಸಿ ಹೋಯಿತು. ಭಾರೀ ಅಂತರದಿಂದ ಗೆಲುವು ದಾಖಲಿಸಿದ ಸಿಎಸ್​ಕೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದು ತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

ಇನ್ನು ಈ ಪಂದ್ಯದಲ್ಲಿನ ಗೆಲುವು ಎಂ.ಎಸ್​. ಧೋನಿ ಅವರ 150ನೇ ಜಯವಾಗಿದ್ದು, ಒಂದೇ ಫ್ರಾಂಚೈಸಿಯಡಿ ಆಡಿದ ಪಂದ್ಯಗಳಲ್ಲಿ ಸಾಧಿಸಿದ 150ನೇ ವಿಕ್ಟರಿ ಇದಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕ್ಯಾಪ್ಟನ್ ಕೂಲ್, ಟಿ-20 ಟೂರ್ನಿಯಲ್ಲಿ ಈ ವಿನೂತನ ರೆಕಾರ್ಡ್​ ಸೆಟ್​ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

2008ರಲ್ಲಿ ಪ್ರಾರಂಭವಾದ ಐಪಿಎಲ್​ ಲೀಗ್​ನಿಂದ ಇಲ್ಲಿಯವರೆಗೆ 259 ಪಂದ್ಯಗಳನ್ನು ಆಡಿರುವ ಎಂ.ಎಸ್​. ಧೋನಿ, ಐದು ಬಾರಿ ತಮ್ಮ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ಕ್ಯಾಪ್ಟನ್ ಎಂಬ ಪಟ್ಟ ಸ್ವೀಕರಿಸಿದ್ದು, ಇದೇ ಮೊದಲ ಸೀಸನ್​ನಲ್ಲಿ ನಾಯಕನ ಸ್ಥಾನದಿಂದ ಸಂಪೂರ್ಣವಾಗಿ ದೂರ ಉಳಿದಿರುವ ಧೋನಿ ಅವರು, ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ನಾಯಕನ ಸ್ಥಾನವನ್ನು ಹಸ್ತಾಂತರಿಸಿದರು.

Advertisement
Tags :
Advertisement