For the best experience, open
https://m.newskannada.com
on your mobile browser.
Advertisement

ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ: ಈ ಸುದಿನ ಏನು ಹೆಸರಿಟ್ಟರು ಗೊತ್ತ ?

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಈ ವಿಶೇಷ ದಿನದಂದೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಮಕ್ಕಳಿಗೆ ನಾಮಕರಣ ಶಾಸ್ತ್ರ ಕೂಡ ಜರುಗಿದೆ. ಧ್ರುವ ಸರ್ಜಾ, ಪ್ರೇರಣಾ, ನಟಿ ಮೇಘನಾ ರಾಜ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಮಗಳಿಗೆ ರುದ್ರಾಕ್ಷಿ ಧ್ರುವ ಸರ್ಜಾ ಹಾಗೂ ಮಗನಿಗೆ ಹಯಗ್ರಿವ ಧ್ರುವ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.
02:24 PM Jan 22, 2024 IST | Ashitha S
ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ  ಈ ಸುದಿನ ಏನು ಹೆಸರಿಟ್ಟರು ಗೊತ್ತ

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಈ ವಿಶೇಷ ದಿನದಂದೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಮಕ್ಕಳಿಗೆ ನಾಮಕರಣ ಶಾಸ್ತ್ರ ಕೂಡ ಜರುಗಿದೆ. ಧ್ರುವ ಸರ್ಜಾ, ಪ್ರೇರಣಾ, ನಟಿ ಮೇಘನಾ ರಾಜ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಮಗಳಿಗೆ ರುದ್ರಾಕ್ಷಿ ಧ್ರುವ ಸರ್ಜಾ ಹಾಗೂ ಮಗನಿಗೆ ಹಯಗ್ರಿವ ಧ್ರುವ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.

Advertisement

ಧ್ರುವ ಸರ್ಜಾ ಅವರು ಆಂಜನೇಯನ ಭಕ್ತರು. ಹನುಮಂತನ ಕಂಡರೆ ಧ್ರುವ ಸರ್ಜಾ ಅವರಿಗೆ ಅಪಾರ ಭಕ್ತಿ. ಹೀಗಾಗಿ, ರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ನಾಮಕರಣ ಶಾಸ್ತ್ರ ನಡೆದಿದೆ. ಈಗ ಈ ದಂಪತಿ ಹೆಸರನ್ನು ರಿವೀಲ್ ಮಾಡಿದ್ದಾರೆ.

2019ರ ನವೆಂಬರ್​ನಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಮದುವೆ ಆದರು. ಪ್ರೇರಣಾ ಹಾಗು ಧ್ರುವ ಸರ್ಜಾ ದಂಪತಿಗೆ ಇಬ್ಬರು ಮಕ್ಕಳು. 2022ರ ಅಕ್ಟೋಬರ್​ನಲ್ಲಿ ಮಗಳು ಜನಿಸಿದಳು. ನಂತರ 2023ರ ಸೆಪ್ಟೆಂಬರ್​ನಲ್ಲಿ ಗಂಡು ಮಗು ಜನಿಸಿತು. ಈಗ ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರಿವ ಎಂದು ನಾಮಕರಣ ಮಾಡಲಾಗಿದೆ.

Advertisement

Advertisement
Tags :
Advertisement