For the best experience, open
https://m.newskannada.com
on your mobile browser.
Advertisement

ಜ.22ರಂದೇ ಆ್ಯಕ್ಷನ್​ ಪ್ರಿನ್ಸ್ ಮಕ್ಕಳಿಗೆ ನಾಮಕರಣ: ಯಾವ ಹೆಸರು ಗೊತ್ತ ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ ಜನವರಿ 22ರ ರಾಮಮಂದಿರ ಉದ್ಘಾಟನಾ ವಿಶೇಷ ದಿನದಂದೇ ಮಕ್ಕಳಿಗೆ ನಾಮಕರಣ ಮಾಡಲಿದ್ದಾರೆ.
11:07 AM Jan 11, 2024 IST | Ashitha S
ಜ 22ರಂದೇ ಆ್ಯಕ್ಷನ್​ ಪ್ರಿನ್ಸ್ ಮಕ್ಕಳಿಗೆ ನಾಮಕರಣ  ಯಾವ ಹೆಸರು ಗೊತ್ತ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ ಜನವರಿ 22ರ ರಾಮಮಂದಿರ ಉದ್ಘಾಟನಾ ವಿಶೇಷ ದಿನದಂದೇ ಮಕ್ಕಳಿಗೆ ನಾಮಕರಣ ಮಾಡಲಿದ್ದಾರೆ.

Advertisement

ಜನವರಿ 22ರಮದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿಕ್ಕಿದೆ. ಅದೇ ದಿನವೇ ತಮ್ಮ ಇಬ್ಬರು ಮಕ್ಕಳಿಗೂ ನಾಮಕರಣ ಮಾಡಲು ತೀಮಾರ್ನಿಸಿದ್ದಾರಂತೆ.

ಧ್ರುವಾ ಮತ್ತು ಪ್ರೇರಣಾ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿನ ಹೆಸರುಗಳನ್ನೇ ಮಕ್ಕಳಿಗೆ ಇಡಲು ಯೋಚಿಸಿದ್ದಾರಂತೆ.‌ ಧ್ರುವ ಕಳೆದ ವರ್ಷ 2ನೇ ಮಗುವಿಗೆ ತಂದೆಯಾದರು. ಮೊದಲ ಮಗು ಹೆಣ್ಣಾಗಿದ್ದು, ಇಬ್ಬರಿಗೂ 2024ರಲ್ಲಿ ಹೆಸರಿಡಲು ಮುಂದಾಗಿದ್ದಾರೆ.

Advertisement

Advertisement
Tags :
Advertisement