ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೊಬೈಲ್ ಬಿಟ್ಟಿರಬಲ್ಲವರಿಗೆ ಬಹುಮಾನ; ಅಮೇರಿಕಾದ ಮೊಸರು ಕಂಪನಿಯಿಂದ ಸವಾಲು

ಜನರ ಪ್ರತಿ ಕ್ಷಣದ ಸಂಗಾತಿಯಾಗಿರುವ ಮೊಬೈಲ್ ನಿಂದ ಒಂದು ತಿಂಗಳು ದೂರವಿದ್ದು ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಅಮೇರಿಕಾದ ಮೊಸರು ಕಂಪನಿಯೊಂದು ಒದಗಿಸುತ್ತಿದೆ.
06:52 PM Jan 23, 2024 IST | Maithri S

ಅಮೇರಿಕಾ: ಜನರ ಪ್ರತಿ ಕ್ಷಣದ ಸಂಗಾತಿಯಾಗಿರುವ ಮೊಬೈಲ್ ನಿಂದ ಒಂದು ತಿಂಗಳು ದೂರವಿದ್ದು ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಅಮೇರಿಕಾದ ಮೊಸರು ಕಂಪನಿಯೊಂದು ಒದಗಿಸುತ್ತಿದೆ.

Advertisement

ಸಿಗ್ಗೀಸ್ ಡೈರಿ ಎಂಬ ಅಮೇರಿಕಾದ ಮೊಸರು ತಯಾರಕ ಕಂಪನಿ ಡಿಜಿಟಲ್ ಡಿಟಾಕ್ಸ್ ನಲ್ಲಿ ಭಾಗವಹಿಸಲು ಜನರನ್ನು ಆಹ್ವಾನಿಸಿದ್ದು, ವಿಜೇತರಿಗೆ ಭಾರೀ ಮೊತ್ತದ ನಗದು ಬಹುಮಾನವನ್ನು ಘೋಷಿಸಿದೆ. ಸವಾಲಲ್ಲಿ ಗೆದ್ದವರಿಗೆ ೮.೩ ಲಕ್ಷ ರೂಪಾಯಿಗಳು ಹಾಗು ಅನೇಕ ವಸ್ತುಗಳನ್ನು ನೀಡುವುದಾಗಿ ಕಂಪನಿ ತಿಳಿಸಿದೆ.

ಮೊಬೈಲ್, ಕಂಪ್ಯೂಟರ್ ಸೇರಿದಂತೆ ಎಲ್ಲಾ ಡಿಜಿಟಲ್ ಸಾಧನಗಳಿಂದ ದೂರವಿದ್ದು, ಸಾಮಾಜಿಕ ಜಾಲತಾಣಗಳನ್ನು ನಿಗದಿತ ಸಮಯದವರೆಗೆ ಬಳಸದಿರುವುದನ್ನು ಡಿಜಿಟಲ್ ಡಿಟಾಕ್ಸ್ ಎನ್ನಲಾಗುತ್ತದೆ.

Advertisement

ಸವಾಲನ್ನು ಸ್ವೀಕರಿಸಿದವರು ಒಂದು ತಿಂಗಳ ಕಾಲ ಮೊಬೈಲ್ ಬಳಸದಂತೆ ಅದನ್ನು ಲಾಕ್ ಬಾಕ್ಸ್ ನಲ್ಲಿ ಇಡಬೇಕು. ಇದರಲ್ಲಿ ಸಫಲರಾದವರಿಗೆ ಫ್ಲಿಪ್ ಫೋನ್, ಪ್ರೀಪೇಯ್ಡ್ ಬ್ಯಾಲೆನ್ಸ್ ಹೊಂದಿರುವ ಸಿಮ್ ಕಾರ್ಡ್ ಮತ್ತು ೩ ತಿಂಗಳ ಮೌಲ್ಯದ ಸಿಗ್ಗಿ ಯೋಗರ್ಟ್ ಪಡೆಯುತ್ತಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ೧೮ ವರ್ಷ ಮೇಲ್ಪಟ್ಟವರಿಗೆ ಅವಕಾಶವಿದ್ದು, ಜ.೩೧ರ ಮೊದಲು ಭಾಗವಹಿಸಬಹುದು. ಜೊತೆಗೆ ಡಿಜಿಟಲ್ ಡಿಟಾಕ್ಸ್ ಏಕೆ ಅಗತ್ಯವೆಂಬುದರ ಬಗ್ಗೆ ಪ್ರಬಂಧ ಬರೆಯಬೇಕು.

Advertisement
Tags :
AMERICAdigital detox challengeLatestNewsNewsKannada
Advertisement
Next Article