ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪೊಲೀಸರಿಂದ ಕಳ್ಳರಿಗೆ ಆಫರ್: ಕಳ್ಳತನದ ಮೊಬೈಲ್​ ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ನೋ ಎಫ್ಐಆರ್

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ. ಅದೇನಂದ್ರೆ  ಬೆಂಗಳೂರು ಪೊಲೀಸರು, ಕಳ್ಳತನ ಮಾಡಿದ ಮೊಬೈಲ್​ಗಳನ್ನು ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. 
10:26 AM Feb 16, 2024 IST | Ashika S

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ. ಅದೇನಂದ್ರೆ  ಬೆಂಗಳೂರು ಪೊಲೀಸರು, ಕಳ್ಳತನ ಮಾಡಿದ ಮೊಬೈಲ್​ಗಳನ್ನು ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ತಪ್ಪನ್ನು ಅರಿತು ಮೊಬೈಲ್ ಪೋಸ್ಟ್ ಬಾಕ್ಸ್​ಗೆ ಹಾಕಬೇಕು. ಆದರೆ ಕಳ್ಳತನ ಮಾಡಿಯೂ ಪೊಲೀಸರು ಕೊಟ್ಟ ಅವಕಾಶವನ್ನ ಮಿಸ್ ಯೂಸ್ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ.

ಮೊಬೈಲ್ ರಸ್ತೆಯಲ್ಲಿ ಸಿಕ್ಕಿದರೂ ಕೂಡ ಪೊಲೀಸ್ ಠಾಣೆಗೆ ಒಪ್ಪಿಸುವ ಪ್ರಮೇಯ ಇಲ್ಲ. ಅಂತಹ ಮೊಬೈಲ್​ಗಳನ್ನೂ ಪೋಸ್ಟ್​ ಬಾಕ್ಸ್​ಗೆ ಹಾಕಿದರೆ ಸಾಕು. ಈ ಮೊಬೈಲ್​ಗಳನ್ನು ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ಪೊಲೀಸರದ್ದು.

Advertisement

ಇನ್ನು ಮುಂದೆ, ಮೊಬೈಲ್ ಕಳೆದು ಹೋದರೆ ಇ – ಲಾಸ್ಟ್​ನಲ್ಲಿ, ಎಫ್​ಐಆರ್, ಎನ್​ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದು ಹೋದ ಬಳಿಕೆ ಕಂಟ್ರೊಲ್ ರೂಂಗೆ ತಿಳಿಸಿ ನಂತರ Central equipment identity register ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕು.

ಪೊಲೀಸರು ಈ ಆ್ಯಪ್ ಮುಖಾಂತರ ಸಾಧ್ಯವಾಷ್ಟು ಬೇಗ ಮೊಬೈಲ್ ಹಿಂದಿರುಗಿಸುವ ವ್ಯವಸ್ಥೆ ಮಾಡಲಿದ್ದಾರೆ.

ಮೊದಲಿಗೆ ಕಮಾಂಡ್ ಸೆಂಟರ್ ಬಳಿ ಪೋಸ್ಟ್ ಬಾಕ್ಸ್ ಇಡಲು ನಿರ್ಧಾರ ಮಾಡಲಾಗಿದೆ. ಪೊಲೀಸರ ಈ ಪ್ಲಾನ್ ವರ್ಕ್ ಆಗುತ್ತಾ ಎಂಬುದನ್ನ ಕಾದು ನೋಡಬೇಕಿದೆ.

Advertisement
Tags :
BANGLAORLatetsNewsNewsKannadaಕಳ್ಳಪೊಲೀಸರುಪ್ರಕರಣ
Advertisement
Next Article