ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚೆನ್ನೈನ ಎಲ್&ಟಿ ಎಜುಟೆಕ್ ನಿಂದ ನಿಟ್ಟೆ ವಿದ್ಯಾರ್ಥಿಗಳಿಗೆ ವೆಲ್ಕಮ್ ಕಿಟ್ ವಿತರಣೆ

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮೆಕ್ಯಾನಿಕಲ್ ಹಾಗೂ ಸಿವಿಲ್ ವಿದ್ಯಾರ್ಥಿಗಳನ್ನು ಇಂಡಸ್ಟ್ರೀ ರೆಡಿಯಾಗಿಸುವ ಹಾಗೂ ವಿವಿಧ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಚೆನ್ನೈನ ಎಲ್&ಟಿ ಎಜುಟೆಕ್ ಸಂಸ್ಥೆಯೊಂದಿಗೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
09:37 AM Apr 11, 2024 IST | Ashitha S

ಉಡುಪಿ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮೆಕ್ಯಾನಿಕಲ್ ಹಾಗೂ ಸಿವಿಲ್ ವಿದ್ಯಾರ್ಥಿಗಳನ್ನು ಇಂಡಸ್ಟ್ರೀ ರೆಡಿಯಾಗಿಸುವ ಹಾಗೂ ವಿವಿಧ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಚೆನ್ನೈನ ಎಲ್&ಟಿ ಎಜುಟೆಕ್ ಸಂಸ್ಥೆಯೊಂದಿಗೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

Advertisement

ಆ ಪ್ರಯುಕ್ತ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ B.Tech ಮತ್ತು ಸಿವಿಲ್ ಎಂಜಿನಿಯರಿಂಗ್ ನಲ್ಲಿ B.Tech ಎರಡನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್ 5 ರಂದು ಸಂಸ್ಥೆಯಲ್ಲಿ ನಡೆದ ಸಣ್ಣ ಔಪಚಾರಿಕ ಕಾರ್ಯಕ್ರಮದಲ್ಲಿ ವೆಲ್ಕಮ್ ಕಿಟ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಕೈಗಾರಿಕಾ ಸಂಸ್ಥೆಯ ಸಹಯೋಗದ ನಿರ್ದೇಶಕ ಡಾ.ಎ.ಎನ್.ಪರಮೇಶ್ವರನ್, ಡೆಪ್ಯೂಟಿ ಕಂಟ್ರೋಲರ್ ಡಾ.ಸುಬ್ರಹ್ಮಣ್ಯ ಭಟ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಪಿ., ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಭಟ್, ಎಲ್&ಟಿ ಎಜುಟೆಕ್ ಪ್ರತಿನಿಧಿ ಮಯಾಂಕ್ ಸೇರಿದಂತೆ ಗೌರವಾನ್ವಿತ ಗಣ್ಯರನ್ನು ಡಾ.ಮೆಲ್ವಿನ್ ಆರ್.ಕ್ಯಾಸ್ಟಲಿನೊ ಸ್ವಾಗತಿಸಿದರು.

Advertisement

ಶ್ರೀನಿವಾಸ ಪೈ ಅವರು ಈ ಉಪಕ್ರಮದ ಬಗ್ಗೆ ವಿವರಿಸಿದರು. ಎಲ್&ಟಿ ಎಜುಟೆಕ್ ಸಮಗ್ರ ಕಾರ್ಯಕ್ರಮದ ಬಗ್ಗೆ ಅವರು ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು. ನಂತರ ಐಐಸಿ ನಿರ್ದೇಶಕ ಡಾ.ಪರಮೇಶ್ವರನ್ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಎಲ್&ಟಿ ಎಜುಟೆಕ್ ಪ್ರತಿನಿಧಿ ಮಾಯಾಂಕ್ ಅವರು ತಮ್ಮ ಯೋಜನೆ ಮತ್ತು ಅನುಭವಗಳನ್ನು ಹಂಚಿಕೊಂಡರು. ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್&ಟಿ ಎಜುಟೆಕ್ ಲಾಂಛನವನ್ನು ಹೊಂದಿರುವ ಟಿ-ಶರ್ಟ್ ಮತ್ತು ವಾಟರ್ ಮಗ್ ಒಳಗೊಂಡ ವೆಲ್ಕಮ್ ಕಿಟ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Advertisement
Tags :
indiaKARNATAKALatestNewsNewsKarnatakaಎಲ್&ಟಿ ಎಜುಟೆಕ್ಚೆನ್ನೈ
Advertisement
Next Article