For the best experience, open
https://m.newskannada.com
on your mobile browser.
Advertisement

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆ: ಏನಾಂದ್ರು ನಾಯಕರು

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆ ನಡೆದಿದೆ.  ಚುನಾವಣಾ ಕಚೇರಿಯಲ್ಲಿ ಸಂಸದ ನಳಿನ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಪ್ರಮೋದ್ ಮಧ್ವರಾಜ್, ಅಭ್ಯರ್ಥಿ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. 
01:24 PM Apr 04, 2024 IST | Ashitha S
ದ ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆ  ಏನಾಂದ್ರು ನಾಯಕರು

ಮಂಗಳೂರು:  ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆ ನಡೆದಿದೆ.  ಚುನಾವಣಾ ಕಚೇರಿಯಲ್ಲಿ ಸಂಸದ ನಳಿನ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಪ್ರಮೋದ್ ಮಧ್ವರಾಜ್, ಅಭ್ಯರ್ಥಿ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

Advertisement

ಸಭೆಯಲ್ಲಿ ಮಾತನಾಡಿದ  ಉಡುಪಿ -ಚಿಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಚುನಾವಣೆ ಭಾರತದ ಭವಿಷ್ಯವನ್ನ ಬರೆಯುವ ಚುನಾವಣೆ. ಕಾಂಗ್ರೆಸ್ ನವರೆ ನಿಮ್ಮಲ್ಲಿ ರಾಷ್ಟ್ರ ಭಕ್ತರು ಇದ್ದಾರೆ ಅಂತಾ ನಂಬಿದ್ದೆ.  ಆದರೆ ಕರ್ನಾಟಕದ ಆತ್ಮ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿಸಿದ್ದಾರೆ.

ವಿಧಾನ ಸೌಧದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಪ್ರಮಾಣವಚನ ಸ್ವೀಕರಿಸುವಾಗ ಪಾಕಿಸ್ತಾನಕ್ಕೆ ಜೈ ಎಂದವರಿಗೆ ಮತ ನೀಡ್ತೀರಾ?. ರಾಮೇಶ್ವರಂ ಕೆಫೆ ಬ್ಲಾಸ್ಟ್ ವಿಚಾರದಲ್ಲಿ ಮೃದು ಧೋರಣೆ ತೋರಿದವರಿಗೆ ಮತ ನೀಡ್ತೀರಾ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನ ಅಮಾಯಕರು ಅಂದವರಿಗೆ ವೋಟ್ ಕೊಡ್ತಿರಾ ? . ಅತ್ಯಂತ ಭಾವುಕತೆಯಿಂದ ನಾನು ನಳಿನ್ ಕುಮಾರ್ ಕಟೀಲ್ ಧನ್ಯವಾದ ಸಮರ್ಪಿಸುತ್ತೇನೆ. ಇಡೀ ಭಾರತಕ್ಕೆ ನಳಿನ್ ಕುಮಾರ್ ಕಟೀಲ್ ಆದರ್ಶ ವ್ಯಕ್ತಿ. ಟಿಕೆಟ್ ತಪ್ಪಿದ ಸಂದರ್ಭದಲ್ಲೂ ದೃತಿಗೆಡದೆ ಪಕ್ಷದ ತತ್ವ ಸಿದ್ಧಾಂತವನ್ನ ಪಾಲಿಸಿದ್ದಾರೆ. ನೂತನ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಬೆಂಬಲ ನೀಡಿದ ರೀತಿ ಶ್ಲಾಘನೀಯ ಎಂದರು.

Advertisement

ಇನ್ನು ಸಭೆಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್  ಮಾತನಾಡಿ, ಲೋಕ ಸಭಾ ಚುನಾವಣೆ ಘೋಷಣೆಯಾಗಿದೆ. ಈ ಬಾರಿ ಮೂರು ಲಕ್ಷದ ಅಂತರದಲ್ಲಿ ಬ್ರಿಜೇಶ್ ಚೌಟ ಗೆಲ್ಲಲಿದ್ದಾರೆ. ಆದರೂ ಅತೀಯಾದ ವಿಶ್ವಾಸ ಒಳ್ಳೆಯದಲ್ಲ, ನನಗೆ ಯಾವ ರೀತಿ 15 ವರ್ಷ ಆಶೀರ್ವಾದ ಮಾಡಿದ್ರೊ ಅದೆ ರೀತಿ ಬ್ರಿಜೇಶ್ ಚೌಟಾಗೂ ಆಶೀರ್ವಾದ ಮಾಡಿ.  ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಚೌಟ, ಉಡುಪಿಯಿಂದ ಕೋಟ ಲೋಕಸಭೆಗೆ ಹೋಗೋದು ಗ್ಯಾರಂಟಿ ಎಂದರು.

ಪೂರ್ವ ಸಭೆಯಲ್ಲಿ ಬಿಜೆಪಿ ಮುಖಂಡ ಸಿಟಿ ರವಿ ಮಾತನಾಡಿ,  ಕೇಸರಿ ಶಾಲು ಜೋರಾಗಿ ಬೀಸಿ,ಇಲ್ಲಿರೋದು ಕೇಸರಿ ಗಾಳಿ. ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಉಡುಪಿಯಲ್ಲಿ ಹೇಳಿದ್ರು. ಉಡುಪಿಗೆ ಕೋಟ, ಮಂಗಳೂರಿಗೆ ಚೌಟ ಕಾಂಗ್ರೆಸ್ ಗೆ ಗೂಟ ಅಂತ. ಅದು ಖಾಲಿ ಗೂಟ ಅಲ್ಲ ಹಾಕಿದ್ರೆ ಬಗಣಿ ಗೂಟ ಹಾಕಬೇಕು. ನಿನ್ನೆ ಮಾಧ್ಯಮದಲ್ಲಿ ಸುದ್ದಿ ನೋಡಿದೆ. ಕೇರಳ ಸರಕಾರ ಸಾಲಕ್ಕಾಗಿ ಸುಪ್ರೀಂ ಕೋರ್ಟಿಗೆ ಹೋಗಿದೆ. ಕಂಠ ಪೂರ್ತಿ ಸಾಲ ಮಾಡಿ , ಕೇರಳ ದಿವಾಳಿಯ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲೂ ಸದ್ಯದಲ್ಲಿ ಅದೆ ಪರಿಸ್ಥಿತಿ ಬರುತ್ತೆ. ರಾಜ್ಯಕ್ಕೆ ಸಿದ್ರಾಮಿಕ್ಸ್ ಬಂದ ಮೇಲೆ ಯಾವುದೆಲ್ಲಾ ಬೆಲೆ ಏರಿಕೆಯಾಗಿದೆ ಗೊತ್ತಾ??. ಸಿದ್ದರಾಮಯ್ಯ ಪ್ಲಸ್ ಎಕನಾಮಿಕ್ಸ್ ಅದು ಸಿದ್ರಾಮಿಕ್ಸ್. ಕ್ವಾರ್ಟರ್ ಗೆ ಬೆಲೆ ಜಾಸ್ತಿ ಮಾಡಿದ್ರು, ಪಹಣಿಪತ್ರದ ಬೆಲೆ ಏರಿಕೆಯಾಯಿತು. ಮಹಿಳೆಯರೇ ಸಿದ್ದರಾಮಯ್ಯ ಹಣ ನೀಡಿದ್ದು ಅವರ ಕಿಸೆ ಹಣ ಅಲ್ಲ. ನಿಮ್ಮ ಯಜಮಾನರ ಕಿಸೆಗೆ ಕೈ ಹಾಕಿ ನೀಡಿದ್ದು. 5 ಕೆಜಿ ಅಕ್ಕಿಯಲ್ಲಿ ಕಾಂಗ್ರೆಸ್ ನ ಒಂದು ಕಾಳು ಅಕ್ಕಿಯೂ ಇಲ್ಲ. ಕೊಟ್ಟಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ. ಜೂನ್ ನಾಲ್ಕರಂದು ಫಲಿತಾಂಶ ಕಂಡು ಕಾಂಗ್ರೆಸ್ ನವರು ಪರ್ಮನೆಂಟ್ ಆಗಿ ಎದೆ ಹೊಡ್ಕೋಬೇಕು. ಮತ್ತೆ ಅವಕಾಶ ಕೊಟ್ರೆ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಾಕಿಸ್ತಾನ ಜಿಂದಾಬಾದ್ ಕೂಗು ಕೇಳಿಸುತ್ತೆ. ಎಸ್ ಡಿ ಪಿ ಐ, ಪಿ ಎಫ್ ಐ ಬೆಂಬಲ ಕೊಟ್ಟಿದ್ದು ಕಾಂಗ್ರೆಸ್ ಗೆ. ಕಾಂಗ್ರೆಸ್ ನ ಗೆಲುವನ್ನ ಪಾಕಿಸ್ತಾನ ಸಂಭ್ರಮಿಸುತ್ತೆ. ಅದಕ್ಕೆ ಕಾಂಗ್ರೆಸ್ ನವರು ಪಾಕಿಸ್ತಾನ ಜಿಂದಾಬಾದ್ ಅಂತಾರೆ. ಇದು ಜಾತಿ ಉಳಿಸೋ ಚುನಾವಣೆಯಲ್ಲ ದೇಶ ಉಳಿಸೋ ಚುನಾವಣೆ. ದೇಶ ಉಳಿದ್ರೆ ನೀನು, ನಾನು, ನಮ್ಮ ಜಾತಿ. ದೇಶವೇ ಇಲ್ಲದಿದ್ರೆ ನೀನು ಇಲ್ಲ ನಿನ್ನ ಜಾತಿ ನೂ ಇಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಮಾತನಾಡಿ, ನಿಮ್ಮ ಪ್ರೀತಿ ವಿಶ್ವಾಸ ಇದ್ರೆ, ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ನನಸಾಗುತ್ತೆ. ದಕ್ಷಿಣ ಕನ್ನಡವನ್ನ ಹಿಂದುತ್ವದ ಭದ್ರ ಕೋಟೆಯಾಗಿ ಉಳಿಸಿಕೊಳ್ಳೋಣ. ಅತ್ಯಂತ ಮತಗಳ ಅಂತರದಲ್ಲಿ ನನ್ನನ್ನ ವಿಜಯಗೊಳಿಸಿ. ನಿಮ್ಮ ವಿಶ್ವಾಸವನ್ನ ಉಳಿಸಿಕೊಳ್ಳುತ್ತೇವೆ ಎಂದರು.

Advertisement
Tags :
Advertisement