For the best experience, open
https://m.newskannada.com
on your mobile browser.
Advertisement

ದ.ಕನ್ನಡದಲ್ಲಿ 10 ಸಾವಿರ ಏಡ್ಸ್ ರೋಗಿಗಳು ಪತ್ತೆ: ಜಿಲ್ಲಾ ಆರೋಗ್ಯಾಧಿಕಾರಿ

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ 10,431ಯಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಮಾಹಿತಿ ಒದಗಿಸಿದರು
11:17 AM Nov 30, 2023 IST | Ashitha S
ದ ಕನ್ನಡದಲ್ಲಿ 10 ಸಾವಿರ ಏಡ್ಸ್ ರೋಗಿಗಳು ಪತ್ತೆ  ಜಿಲ್ಲಾ ಆರೋಗ್ಯಾಧಿಕಾರಿ

ಮಂಗಳೂರು: ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ 10,431ಯಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಮಾಹಿತಿ ಒದಗಿಸಿದರು.

Advertisement

2007-08ರ ಸಾಲಿನಲ್ಲಿ 1,169 ಎಚ್‌ಐವಿ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಮುಂದಿನ ವರ್ಷ 1064 ಪ್ರಕರಣಗಳು ಇದ್ದವು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಮೂರಂಕಿಗೆ ಇಳಿಯಿತು. 2016-17ನೇ ಸಾಲಿನಲ್ಲಿ ಮೊದಲ ಬಾರಿ 600ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾದವು. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ. ಕಳೆದ 17 ವರ್ಷಗಳಲ್ಲಿ ಜಿಲ್ಲೆಯಲ್ಲಿ 7,49,494 ಮಂದಿ ಪರೀಕ್ಷೆಗೆ ಒಳಗಾದವರು.

ಇನ್ನು ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ತಡೆಗೆ ಸಂಬಂಧಿಸಿ 19 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಇವೆ. 3 ಎಆರ್‌ಟಿ ಕೇಂದ್ರಗಳಿದ್ದು 13 ಲಿಂಗ್ ಎಆರ್‌ಟಿ ಕೇಂದ್ರಗಳು ಇವೆ. 54 ರೆಡ್ ರಿಬ್ಬನ್ ಕ್ಲಬ್‌ಗಳು, 14 ರಕ್ತ ನಿಧಿ ಕೇಂದ್ರಗಳು ಮತ್ತು 3 ರಕ್ತ ಶೇಖರಣಾ ಘಟಕಗಳು ಇವೆ. ಏಡ್ಸ್ ತಡೆ ದಿನಾಚರಣೆ ಅಂಗವಾಗಿ ಡಿ.1ರಂದು ಬೆಳಿಗ್ಗೆ 7 ಗಂಟೆಗೆ ಬಾವುಟಗುಡ್ಡದಿಂದ ಎಸ್‌ಡಿಎಂ ಕಾನೂನು ಕಾಲೇಜಿನ ವರೆಗೆ ಜಾಥಾ ನಡೆಯಲಿದೆ ಎಂದು ತಿಳಿಸಿದರು.

Advertisement

Advertisement
Tags :
Advertisement