For the best experience, open
https://m.newskannada.com
on your mobile browser.
Advertisement

ಬಿಲ್ಲವ Vs ಬಂಟ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಬ್ಯುಸಿಯಾದ ಬುಕ್ಕಿಗಳಿಗೆ ರಾಜಕೀಯ ಬೆಟ್ಟಿಂಗ್ ಮೇಲೂ ಕಣ್ಣು ಬಿದ್ದಿದೆ. ಫಲಿತಾಂಶಕ್ಕೂ ಇನ್ನೂ ಒಂದು ತಿಂಗಳಿಗೆ ಮೊದಲೇ ಬೆಟ್ಟಿಂಗ್ ಶುರುವಾಗಿದೆ.
03:38 PM May 06, 2024 IST | Ashitha S
ಬಿಲ್ಲವ vs ಬಂಟ  ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ಪುತ್ತೂರು: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಬ್ಯುಸಿಯಾದ ಬುಕ್ಕಿಗಳಿಗೆ ರಾಜಕೀಯ ಬೆಟ್ಟಿಂಗ್ ಮೇಲೂ ಕಣ್ಣು ಬಿದ್ದಿದೆ. ಫಲಿತಾಂಶಕ್ಕೂ ಇನ್ನೂ ಒಂದು ತಿಂಗಳಿಗೆ ಮೊದಲೇ ಬೆಟ್ಟಿಂಗ್ ಶುರುವಾಗಿದೆ.

Advertisement

ಬಿಜೆಪಿ ಮತ್ತು ಕಾಂಗ್ರೇಸ್ ಮಧ್ಯೆ ನೇರ ಹಣಾಹಣಿಯ ಕ್ಷೇತ್ರ ಎಂದರೆ ಅದು ದಕ್ಷಿಣಕನ್ನಡ. ಈ ಬಾರಿ ಅತೀ ಕುತೂಹಲದ ಕ್ಷೇತ್ರವಾಗಿರುವ ದಕ್ಷಿಣಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಎರಡೂ ಪಕ್ಷದಿಂದ ಹೊಸ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಇವರು ಇಬ್ಬರೂ ಕೂಡಾ ಬಲಿಷ್ಟ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು. ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ . ಆರ್.ಪೂಜಾರಿ ಇನ್ನೊಂದು ಬಲಿಷ್ಟ ಬಿಲ್ಲವ ಸಮಯದಾಯಕ್ಕೆ ಸೇರಿದವರು. ಈ ಕಾರಣಕ್ಕಾಗಿಯೇ ಈ ಬಾರಿ ಪಕ್ಷದ ಜೊತೆಗೆ ಜಾತಿಯ ಪ್ರಭಾವವೂ ಹೆಚ್ಚಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಅಭ್ಯರ್ಥಿಗಳೂ ಬುಕ್ಕಿಗಳ ಫೇವರೇಟ್ ಆಗಿದ್ದಾರೆ. ಚುನಾವಣೆಯಲ್ಲಿ ಯಾರ ಗೆಲುವು, ಯಾರ ಸೋಲು ಎನ್ನುವ ಆಧಾರದಲ್ಲಿ ಬೆಟ್ಟಿಂಗ್ ಶುರು ಮಾಡಿಕೊಂಡಿದ್ದಾರೆ. 10 ಲಕ್ಷ,20 ಲಕ್ಷ ಮತ್ತು ಕೋಟಿಗೂ ಬೆಟ್ ಹಣ ತಲುಪಿದೆ.

Advertisement

ಹಣ ಮಾಡುವ ಉದ್ಧೇಶದಿಂದ ಸಾಮಾನ್ಯ ವರ್ಗದ ಜನರಿಂದಲೂ ಬೆಟ್ಟಿಂಗ್ ದಂದೆ ಶುರುವಾಗಿದೆ. ಆದರೀಗ ಹಣದ ಆಸೆಗೆ ಕುಟುಂಬಗಳು ಬಲಿಯಾಗುವ ಆತಂಕದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಅಲ್ಲದೆ ಕೆಲವರು ಹಣ ಕಳೆದುಕೊಂಡು ಬೀದಿ ಪಾಲಾಗುವ ಆತಂಕದಲ್ಲಿದ್ದಾರೆ

Advertisement
Tags :
Advertisement