For the best experience, open
https://m.newskannada.com
on your mobile browser.
Advertisement

ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿ!

ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿಯಾಗಿದೆ. ಕಾಂಗ್ರೆಸ್-ಬಿಜೆಪಿ ಮತಗಳು ಛಿದ್ರ ಛಿದ್ರವಾಗುವ ಭೀತಿ ಎದುರಾಗಿದೆ. ಪ್ರಣಾಳಿಕೆ ಬಿಡುಗಡೆ ಬೆನ್ನಲ್ಲೇ ಸೌಜನ್ಯ ಪರ ಹೋರಾಟಗಾರರು ಮನೆ ಮನೆ ತೆರಳಿ ಪ್ರಚಾರಕ್ಕೀಳಿದ್ದಾರೆ. ಪುತ್ತೂರು ಭಾಗದಲ್ಲಿ ನೋಟಾ ಪ್ರಚಾರ ಆರಂಭವಾಗಿದೆ.
10:29 AM Apr 19, 2024 IST | Ashitha S
ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿ

ಮಂಗಳೂರು: ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿಯಾಗಿದೆ. ಕಾಂಗ್ರೆಸ್-ಬಿಜೆಪಿ ಮತಗಳು ಛಿದ್ರ ಛಿದ್ರವಾಗುವ ಭೀತಿ ಎದುರಾಗಿದೆ. ಪ್ರಣಾಳಿಕೆ ಬಿಡುಗಡೆ ಬೆನ್ನಲ್ಲೇ ಸೌಜನ್ಯ ಪರ ಹೋರಾಟಗಾರರು ಮನೆ ಮನೆ ತೆರಳಿ ಪ್ರಚಾರಕ್ಕೀಳಿದ್ದಾರೆ. ಪುತ್ತೂರು ಭಾಗದಲ್ಲಿ ನೋಟಾ ಪ್ರಚಾರ ಆರಂಭವಾಗಿದೆ.

Advertisement

ಜಿಲ್ಲೆಯ ಗ್ರಾಮ ಗ್ರಾಮಗಳಲ್ಲೂ ಸೌಜನ್ಯ ಪರ ಹೋರಾಟಗಾರರು ಪ್ರಚಾರ ಆರಂಭಿಸಲು ಸಜ್ಜಾಗಿದ್ದಾರೆ. ನೋಟಾ ಎಂಟ್ರಿಯಿಂದ ಜಿಲ್ಲೆಯ ರಾಜಕೀಯ ಲೆಕ್ಕಚಾರ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಸೌಜನ್ಯ ಪರ ಪ್ರತಿಭಟನಾ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ.

New Project

Advertisement

ಹೀಗಾಗಿ ಲಕ್ಷಾಂತರ ಜನ ಬೆಂಬಲ ನೋಟಾ ಮತವಾಗಿ ಪರಿವರ್ತನೆಯಾಗುತ್ತಾ? ಎಂಬ ಆತಂಕ ಮನೆ ಮಾಡಿದೆ. ಯಾವ ಪಕ್ಷಕ್ಕೆ ಹೆಚ್ಚು ಹೊಡೆತ ನೀಡುತ್ತೆ ಈ ಬೆಳವಣಿಗೆ ಎಂಬುದು ಕಾದು ನೋಡಬೇಕಿದೆ.

ಇನ್ನು ಜಿಲ್ಲೆಯ ವಿಚಾರಕ್ಕೆ ಬಂದ್ರೆ ಸುಳ್ಯ ಪುತ್ತೂರು ಭಾಗದಲ್ಲಿ ಸೌಜನ್ಯ ಹೋರಾಟಕ್ಕೆ ತೀವ್ರ ಬೆಂಬಲ ಸಿಗುತ್ತಿದೆ. ಈ ಹಿನ್ನಲೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಎರಡು ಕ್ಷೇತ್ರಗಳಲ್ಲಿ ನೋಟಾ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆ ಕಾಂಗ್ರೆಸ್ -ಬಿಜೆಪಿಗೆ ತಲೆನೋವಾಗಿದೆ.

Advertisement
Tags :
Advertisement