For the best experience, open
https://m.newskannada.com
on your mobile browser.
Advertisement

ಪೆನ್ ಡ್ರೈವ್ ಪ್ರಕರಣದ ಬೆನ್ನಲ್ಲೇ ಡಿಕೆಶಿ ಪೋಸ್ಟರ್ ವಾರ್

ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ನಗರದ ಕೆಲವು ಕಡೆಗಳಲ್ಲಿ ಅವರ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಲಾಗಿದೆ.ನಗರದ ಲೂಲು ಮಾಲ್ ಹಾಗೂ ಕೆಪಿಸಿಸಿ ಕಚೇರಿ ಮುಂದೆ ಆಗಂತುಕರು ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಲಾಗಿದೆ‌.
12:11 PM May 07, 2024 IST | Nisarga K
ಪೆನ್ ಡ್ರೈವ್ ಪ್ರಕರಣದ ಬೆನ್ನಲ್ಲೇ ಡಿಕೆಶಿ ಪೋಸ್ಟರ್ ವಾರ್
ಪೆನ್ ಡ್ರೈವ್ ಪ್ರಕರಣದ ಬೆನ್ನಲ್ಲೇ ಡಿಕೆಶಿ ಪೋಸ್ಟರ್ ವಾರ್
ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ನಗರದ ಕೆಲವು ಕಡೆಗಳಲ್ಲಿ ಅವರ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಲಾಗಿದೆ.ನಗರದ ಲೂಲು ಮಾಲ್ ಹಾಗೂ ಕೆಪಿಸಿಸಿ ಕಚೇರಿ ಮುಂದೆ ಆಗಂತುಕರು ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಲಾಗಿದೆ‌.

ಪೆನ್ ಡ್ರೈವ್ ವೀಡಿಯೋ ಲೀಕ್ ಹಿಂದೆ ಡಿಸಿಎಂ ಡಿಕೆಶಿ ಕೈವಾಡವಿದೆ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಬೆನ್ನಲ್ಲೇ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಅನಾಮಿಕರು ಅಂಟಿಸಿರುವ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. “ಹೆಣ್ಣು ಮಕ್ಕಳ ವೀಡಿಯೋ ಬಳಸಿಕೊಂಡು ರಾಜಕೀಯ ಮಾಡುವ ವ್ಯಕ್ತಿ” ಎಂದು ಇವುಗಳಲ್ಲಿ ಆರೋಪಿಸಲಾಗಿದೆ. ಜೊತೆಗೆ ಹಲವು ಅವಹೇಳನಕಾರಿ ಒಕ್ಕಣೆಗಳೂ ಈ ಪೋಸ್ಟರ್‌ಗಳಲ್ಲಿ ಕಂಡುಬಂದಿವೆ.

Advertisement

ಕೆಪಿಸಿಸಿ ಕಚೇರಿ, ಡಿಕೆ ಶಿವಕುಮಾರ್‌ ಪಾಲುದಾರಿಕೆ ಹೊಂದಿರುವ ಲುಲು ಮಾಲ್ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪೋಸ್ಟರ್ ಕಂಡುಬಂದಿವೆ. ರಾತ್ರೋರಾತ್ರಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದು, ಪೊಲೀಸರು ಇದರ ಹಿಂದಿರುವವರ ಹುಡುಕಾಟದಲ್ಲಿ ತೊಡಗಿದ್ದಾರೆ.

Advertisement
Advertisement
Tags :
Advertisement