For the best experience, open
https://m.newskannada.com
on your mobile browser.
Advertisement

ಡಿ.ವಿ.ಸದಾನಂದಗೌಡ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ

ಯಾವಾಗ ದೇವೇಗೌಡರು ಅವರ ಅಳಿಯನನ್ನ ಬಿಜೆಪಿ ಸಿಂಬಲ್​ನಿಂದ ನಿಲ್ಲಿಸಿದ್ರೋ ಅದೇ ಜೆಡಿಎಸ್​​ನ ಮೊದಲ ಸೂಸೈಡ್ ಅಟೆಮ್ಟ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
01:41 PM Mar 19, 2024 IST | Ashitha S
ಡಿ ವಿ ಸದಾನಂದಗೌಡ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಡಿ ಕೆ ಶಿ

ಬೆಂಗಳೂರು: "ಯಾವಾಗ ದೇವೇಗೌಡರು ಅವರ ಅಳಿಯನನ್ನ ಬಿಜೆಪಿ ಸಿಂಬಲ್​ನಿಂದ ನಿಲ್ಲಿಸಿದ್ರೋ ಅದೇ ಜೆಡಿಎಸ್​​ನ ಮೊದಲ ಸೂಸೈಡ್ ಅಟೆಮ್ಟ್" ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

Advertisement

ಬೆಂಗಳೂರಲ್ಲಿ ಮಾತನಾಡಿರುವ ಅವರು,  ನಾನು ನಿರೀಕ್ಷೆ ಮಾಡಿದ್ದೆ, ಅವರ ಪಕ್ಷಕ್ಕೆ ದೊಡ್ಡ ಮುಜುಗರ ಉಂಟಾಗಿದೆ. ಹಾಲಿ ಶಾಸಕರಿದ್ದಾರೆ, ಅವರ ಸ್ಟ್ರೆಂಥ್ ಬಿಜೆಪಿಗೆ ಬೇಕಿತ್ತು. ಬಿಜೆಪಿ ಸ್ಟೈಲೇ ಅದು, ಎಲ್ಲಾ ರಾಜ್ಯದಲ್ಲೂ ಹೀಗೇ ಮಾಡ್ತಾರೆ. ಅದು ಅವರ ಇಂಟರ್ನಲ್ ವಿಚಾರ, ನಾನು ಕಾಮೆಂಟ್ ಮಾಡಲ್ಲ. ಅವರವರ ಪಕ್ಷದ್ದು, ಅವರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ಸಂಸದ ಸದಾನಂದಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಟಿಕೆಟ್ ಸಿಗದವರಿಗೆ ಕರೆದುಕೊಂಡು ಬರೋದು ಸಾಮಾನ್ಯ. ಈ ಹಿಂದೆ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಕರೆ ತಂದು ಟಿಕೆಟ್ ನೀಡಿದ್ವಿ. ಜೆಡಿಎಸ್​ನವರು ಮೂಡಿಗೆರೆ ಕುಮಾರಸ್ವಾಮಿ, ಆಯನೂರು ಮಂಜುನಾಥ್ ಅವರನ್ನ ಕರೆ ತಂದು ಟಿಕೆಟ್ ನೀಡಿದ್ದರು.   ಇದು ರಾಜಕೀಯದಲ್ಲಿ ಸರ್ವಸಾಮಾನ್ಯ. ಇದನ್ನು ಯಾವ ಪಾರ್ಟಿರವರೂ ಮುಚ್ಚಿಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸಿದ್ಧಾಂತ ಮೆಚ್ಚಿ ಬರ್ತಾರೆ ಎಂದು ಮುಕ್ತ ಆಹ್ವಾನ ಇದೆ ಎಂದರೆ.

Advertisement

Advertisement
Tags :
Advertisement