For the best experience, open
https://m.newskannada.com
on your mobile browser.
Advertisement

ರಾತ್ರಿ ಹೊತ್ತು ಮೊಸರು ತಿನ್ನುವುದರಿಂದ ಏನಾಗುತ್ತದೆ ಗೊತ್ತೆ ?

ಭಾರತೀಯರಲ್ಲಿ ಶೇ.90ರಷ್ಟು ಮಂದಿ ಊಟದ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಊಟ ಅಪೂರ್ಣ ಆಗಿರುತ್ತದೆ.
01:18 PM Nov 22, 2023 IST | Ramya Bolantoor
ರಾತ್ರಿ ಹೊತ್ತು ಮೊಸರು ತಿನ್ನುವುದರಿಂದ  ಏನಾಗುತ್ತದೆ ಗೊತ್ತೆ

ಭಾರತೀಯರಲ್ಲಿ ಶೇ.90ರಷ್ಟು ಮಂದಿ ಊಟದ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಊಟ ಅಪೂರ್ಣ ಆಗಿರುತ್ತದೆ. ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುತ್ತದೆ. ಅದು ಹಾಲಿನಲ್ಲಿರುವ ಲ್ಯಾಕ್ಟೋಸ್‌ನಿಂದ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ರಾತ್ರಿ ಊಟಕ್ಕೆ ಮೊಸರು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಕೆಲವರು ಸಲಹೆ ನೀಡುತ್ತಾರೆ. ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ? ಎಂಬುದನ್ನು ತಿಳಿಯೋಣ

Advertisement

ದೇಹದಲ್ಲಿನ ಶಾಖವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ತಂಪಾಗಿಸಲು ಮೊಸರು ಮತ್ತು ಮೊಸರಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಲು ಸಲಹೆಯನ್ನು ಕೊಡುತ್ತಾರೆ. ಮೊಸರು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಮೊಸರು ಹುಳಿ ಮತ್ತು ಸಿಹಿ ಮಿಶ್ರಿತ. ಇದನ್ನು ರಾತ್ರಿ ಹೊತ್ತು ತಿನ್ನುವುದರಿಂದ ಕೆಲವರಿಗೆ ಕಫ ಆಗುವುದು.

ಮೊಸರು ಅನ್ನವು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಮತ್ತು ಜೀರ್ಣಕ್ರಿಯೆಯನ್ನು ಮಾಡುತ್ತದೆ. ಅತಿಸಾರದಂತಹ ಜಠರಗರುಳಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಪ್ರೋಬಯಾಟಿಕ್ಗಳು ಸಹಾಯ ಮಾಡುತ್ತವೆ.

Advertisement

ಯಾರಿಗೆ ಬೇಗನೆ ಶೀತ, ಕಫ ಸಮಸ್ಯೆ ಬರುತ್ತದೋ ಅವರು ಮೊಸರನ್ನು ರಾತ್ರಿ ಹೊತ್ತು ಮೊಸರು ತಿನ್ನದಿರುವುದು ಒಳ್ಳೆಯದು. ಏನೂ ತೊಂದರೆಯಾಗದಿದ್ದರೆ ಮೊಸರು ತಿನ್ನಬಹುದು. ರಾತ್ರಿ ಮೊಸರು ತಿಂದರೆ ಜೀರ್ಣವಾಗಲು ಕಷ್ಟವಾಗುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದು ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ.

ಮಧುಮೇಹ, ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೂ ನಿಮಗೆ ರಾತ್ರಿ ಹೊತ್ತು ಮೊಸರು ತಿನ್ನಲೇಬೇಕು ಅನಿಸಿದರೆ ಅದರಲ್ಲಿ ಸ್ವಲ್ಪ ಮಜ್ಜಿಗೆ ಮಾಡಿ ಕುಡಿಯಿರಿ. ನಿಮಗೆ ಮೊಸರು ತಿನ್ನಲೇಬೇಕು ಅನಿಸಿದರೆ ಅದನ್ನು ಮಣ್ಣಿನ ಪಾತ್ರೆಯಲ್ಲಿ ಇಡುವುದು ಒಳ್ಳೆಯದು. ಉಕ್ಕಿನ ಪಾತ್ರೆಗಳಲ್ಲಿಟ್ಟರೂ ಪರವಾಗಿಲ್ಲ. ಪ್ಲಾಸ್ಟಿಕ್‌ ನಂತಹ  ವಸ್ತುಗಳನ್ನು ಬಳಸದಿರುವುದು ಉತ್ತಮ. ಬೆಳಗ್ಗೆ ಹೊತ್ತು ಮಜ್ಜಿಗೆ ಮಾಡಿ ಅದರೊಳಗೆ ಬೀಜಗಳು ಹಾಕಿ ಅಥವಾ ಮೊಸರಿಗೆ ಸ್ವಲ್ಪ ನೀರು ಹಾಕಿ ನಿಮಗಿಷ್ಟವಾದ ಹಣ್ಣುಗಳನ್ನು ಹಾಕಿ ಕೂಡ ಸೇವಿಸಬಹುದು. ಇದರಿಂದ ನೀವು ದಿನವಿಡೀ ಆ್ಯಕ್ಟಿವ್ ಆಗಿರುತ್ತೀರಿ.

Advertisement
Tags :
Advertisement