For the best experience, open
https://m.newskannada.com
on your mobile browser.
Advertisement

ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್‌ ಮಾಡಿದವರಿಗೆ ಸಿಕ್ಕಿದ್ದೇನು ಗೊತ್ತಾ?

ಕಳೆದ 5 -6 ವರ್ಷಗಳಿಂದ ಆನ್‌ ಲೈನ್‌ ಫುಡ್‌ ಡೆಲಿವರಿ ಆಪ್‌ಗಳ ಮೂಲಕ ಆಹಾರ ಆರ್ಡರ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಂತಹ ಆಪ್‌ ಗಳ ಮೂಲಕ ತರಿಸಿಕೊಂಡ ಆಹಾರ ಕೆಲವೊಮ್ಮೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಮಾನ್ಯ. ಅದೇ ರೀತಿ ಆರ್ಡರ್‌ ಮಾಡಿದ ಫುಡ್‌ ನಲ್ಲಿ ಹಲ್ಲಿ, ಜಿರಲೆಯಂತಹ ಜೀವಿಗಳು ಕೂಡ ಸಿಕ್ಕಿದ ಹಲವು ನಿದರ್ಶನಗಳಿವೆ.
07:02 PM Dec 25, 2023 IST | Ashitha S
ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್‌ ಮಾಡಿದವರಿಗೆ ಸಿಕ್ಕಿದ್ದೇನು ಗೊತ್ತಾ

ಮುಂಬೈ: ಕಳೆದ 5 -6 ವರ್ಷಗಳಿಂದ ಆನ್‌ ಲೈನ್‌ ಫುಡ್‌ ಡೆಲಿವರಿ ಆಪ್‌ಗಳ ಮೂಲಕ ಆಹಾರ ಆರ್ಡರ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಂತಹ ಆಪ್‌ ಗಳ ಮೂಲಕ ತರಿಸಿಕೊಂಡ ಆಹಾರ ಕೆಲವೊಮ್ಮೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಮಾನ್ಯ. ಅದೇ ರೀತಿ ಆರ್ಡರ್‌ ಮಾಡಿದ ಫುಡ್‌ ನಲ್ಲಿ ಹಲ್ಲಿ, ಜಿರಲೆಯಂತಹ ಜೀವಿಗಳು ಕೂಡ ಸಿಕ್ಕಿದ ಹಲವು ನಿದರ್ಶನಗಳಿವೆ.

Advertisement

ಇದೀಗ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಊಟದಲ್ಲಿ ಒಂದಲ್ಲಾ ಎರಡು ಮಾತ್ರೆಗಳು ಪತ್ತೆಯಾಗಿದ್ದು, ವ್ಯಕ್ತಿ ಆತಂಕಕ್ಕೊಳಗಾಗಿದ್ದಾರೆ. ಭಾರೀ ಹಸಿವಿನಿಂದ ಚಿಕನ್‌ ಆರ್ಡರ್‌ ಕಾದು ಇನ್ನೇನು ತಿನ್ನಬೇಕು ಎಂದುಕೊಂಡ ವ್ಯಕ್ತಿ ಆಹಾರದ ಪೊಟ್ಟಣ ತೆಗೆದು ನೋಡಿ ಆತಂಕಗೊಂಡಿದ್ದಾರೆ. ಮುಂಬೈಮಲ್ಲಿ ಈ ಘಟನೆ ನಡೆದಿದ್ದು, ಚಿಕನ್‌ನಲ್ಲಿ ಮಾತ್ರೆಗಳು ಪತ್ತೆಯಾಗಿರುವ ಫೋಟೋ ವೈರಲ್‌ ಆಗಿದೆ.

ಮುಂಬೈನ ವ್ಯಕ್ತಿಯಾದ ಉಜ್ವಲ್‌ ಪುರಿ ಎನ್ನುವವರು ಆನ್‌ಲೈನ್‌ ಫುಡ್‌ ಆರ್ಡರ್ ಆ್ಯಪ್‌ ಸ್ವಿಗ್ಗಿ ಮೂಲಕ ನಗರದಲ್ಲಿ ಫೇಮಸ್​ ಕೆಫೆ ಆಗಿರುವ ಲಿಯೋಪೋಲ್ಡ್ ಕೆಫೆಯಿಂದ ಚಿಕನ್ ಆರ್ಡರ್​ ಮಾಡಿದ್ದರು. ಅವರು ನೀಡಿದ್ದ ಸಮಯ ಕಾದ ನಂತರ ಸ್ವಿಗ್ಗಿ ಬಾಯ್ ಕೆಫೆಯಿಂದ ಚಿಕನ್‌ ತಂದುಕೊಟ್ಟಿದ್ದಾನೆ. ಚಿಕನ್‌ ಪ್ಯಾಕ್ ನೋಡಿ ಖುಷಿಯಾದ ಉಜ್ವಲ್‌ ಪುರಿ ಖುಷಿಯಿಂದಲೇ ಓಪನ್ ಮಾಡಿದ್ದಾರೆ. ಆದರೆ ಚಿಕನ್‌ನೊಂದಿಗೆ ಬಂದ ಮಾತ್ರೆಗಳನ್ನು ಕಂಡು ಉಜ್ವಲ್‌ ಪುರಿ ಗಾಬರಿಗೊಂಡಿದ್ದಾರೆ. ಈ ವಿಚಾರವನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ಉಜ್ವಲ್‌ ಪುರಿ ಎನ್ನುವವರು ಚಿಕನ್ ಜೊತೆ ಮಾತ್ರೆ ಇರುವ ಫೋಟೋವನ್ನು ಕ್ಲಿಕ್ ಮಾಡಿ ತಮ್ಮ ಎಕ್ಸ್‌ ಅಕೌಂಟ್​​ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಇದು ಕ್ರಿಸ್​ಮಸ್​ಗೆ ಸಿಕ್ಕ ವಿಶೇಷ ಕೊಡುಗೆ ಎಂದು ಬರೆದುಕೊಂಡು ಸ್ವಿಗ್ಗಿ ಕಂಪನಿಗೆ ಟ್ಯಾಗ್‌ ಮಾಡಿದ್ದಾರೆ.

Advertisement

Advertisement
Tags :
Advertisement