For the best experience, open
https://m.newskannada.com
on your mobile browser.
Advertisement

ಜನಪ್ರಿಯ ವೆಬ್‌ ತಾಣ ಬಂದ್‌ ಆಗಿದ್ದೇಕೆ ಗೊತ್ತಾ?

ಅಪರಿಚಿತರೊಂದಿಗೆ ಚಾಟಿಂಗ್‌ ಹಾಗೂ ಸಂಪರ್ಕ ಸಾಧಿಸಲು ಜನಪ್ರಿಯ ವೆಬ್‌ ಸೈಟ್‌ ಎಂದೆನಿಸಿಕೊಂಡಿದ್ದ ಒಮೆಗಲ್ ವೆಬ್‌ ಸೈಟ್‌ 14 ವರ್ಷಗಳ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಹೇಳಿದೆ.
08:25 PM Nov 09, 2023 IST | Ashika S
ಜನಪ್ರಿಯ ವೆಬ್‌ ತಾಣ ಬಂದ್‌ ಆಗಿದ್ದೇಕೆ ಗೊತ್ತಾ

ವಾಷಿಂಗ್ಟನ್‌: ಅಪರಿಚಿತರೊಂದಿಗೆ ಚಾಟಿಂಗ್‌ ಹಾಗೂ ಸಂಪರ್ಕ ಸಾಧಿಸಲು ಜನಪ್ರಿಯ ವೆಬ್‌ ಸೈಟ್‌ ಎಂದೆನಿಸಿಕೊಂಡಿದ್ದ ಒಮೆಗಲ್ ವೆಬ್‌ ಸೈಟ್‌ 14 ವರ್ಷಗಳ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಹೇಳಿದೆ.

Advertisement

ವೆಬ್‌ ತಾಣದ ಸ್ಥಾಪಕ ಲೀಫ್‌ ಕೆ ಬ್ರೂಕ್ಸ್‌ ವೆಬ್‌ ತಾಣ ಬಂದ್‌ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾಣದ ನಿರ್ವಹಣಾ ವೆಚ್ಚ, ಹಾಗೂ ದುರುಪಯೋಗ ತಡೆ ಕಷ್ಟಸಾಧ್ಯ ಇದೇ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದ್ದಾರೆ.

ಈ ತಾಣವನ್ನು 2009ರಲ್ಲಿ ಸ್ಥಾಪಿಸಲಾಗಿದ್ದು, ಅಪರಿಚಿತರೊಂದಿಗೆ ಚಾಟಿಂಗ್‌ ಸಂಭಾಷಣೆ ಸೇರಿದಂತೆ ತಡೆರಹಿತ ಸಂಪರ್ಕ ಸಾಧಿಸಲು ಅವಕಾಶ ನೀಡಿತ್ತು. ಅಲ್ಲದೆ ತಮ್ಮ ವೈಯಕ್ತಿಕ ವಿವರಗಳನ್ನು ವೆಬ್‌ ತಾಣಕ್ಕೆ ಒದಗಿಸುವ ಯಾವುದೇ ತಾಪತ್ರಯ ಇರಲಿಲ್ಲ. ಅಲ್ಲದೆ ಚಾಟಿಂಗ್‌ ಮಾಡಬೇಕೆಂದರೆ ಯಾವುದೇ ರೀತಿಯ ನೋಂದಣೆ ಅಗತ್ಯವೇ ಇರಲಿಲ್ಲ. ಇದೇ ಕಾರಣದಿಂದ ಈ ತಾಣ ಬಹುಜನಪ್ರಿಯತೆ ಪಡೆದಿತ್ತು.

Advertisement

Advertisement
Tags :
Advertisement