For the best experience, open
https://m.newskannada.com
on your mobile browser.
Advertisement

ಹೆಂಡತಿ ಬಿಟ್ಟವನು ರಾಮನ ಪೂಜೆ ಮಾಡುವುದುಂಟೇ ?: ಸ್ವಾಮಿ ಟ್ವೀಟ್

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಇನ್ನೇನು ಅಂತಿಮ ಹಂತದಲ್ಲಿದ್ದು ದೇಶವಾಸಿಗಳೆಲ್ಲಾ ರಾಮ ಮಂದಿರದ ಲೋಕಾರ್ಪಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು ಅದಕ್ಕೆ ಬೇಕಾದ ಸಿದ್ದತೆಗಳು ಜೋರಾಗೇ ನಡೀತಿದೆ.
10:17 AM Dec 27, 2023 IST | Ashitha S
ಹೆಂಡತಿ ಬಿಟ್ಟವನು ರಾಮನ ಪೂಜೆ ಮಾಡುವುದುಂಟೇ    ಸ್ವಾಮಿ ಟ್ವೀಟ್

ವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಇನ್ನೇನು ಅಂತಿಮ ಹಂತದಲ್ಲಿದ್ದು ದೇಶವಾಸಿಗಳೆಲ್ಲಾ ರಾಮ ಮಂದಿರದ ಲೋಕಾರ್ಪಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು ಅದಕ್ಕೆ ಬೇಕಾದ ಸಿದ್ದತೆಗಳು ಜೋರಾಗೇ ನಡೀತಿದೆ.

Advertisement

ಆದರೆ ಈ ಮಧ್ಯೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕಿಡಿಯೊಂದನ್ನು ಹೊತ್ತಿಸಿದ್ದು, ಹೆಂಡತಿಯನ್ನು ಬಿಟ್ಟ ಪ್ರಧಾನಿ  ಮೋದಿ ರಾಮನ ಪೂಜೆ ಮಾಡುವುದುಂಟೇ? ಎಂದು ಪ್ರಶ್ನಿಸಿದ್ದಾರೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನು ಹೆಂಡತಿಯ ರಕ್ಷಣೆಗಾಗಿ ದಶಕಗಳ ಕಾಲ ಯುದ್ಧ ಮಾಡಿದ್ದಾನೆ. ಆದ್ರೆ ಪ್ರಧಾನಿ ಮೋದಿ ತನ್ನ ಹೆಂಡತಿಯನ್ನೇ ಬಿಟ್ಟು ಬಂದಂಥ ವ್ಯಕ್ತಿ. ಹೀಗಿರುವಾಗ ಶ್ರೀರಾಮನಂಥಹ ಮಹಾಪುರುಷನ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲು ರಾಮನ ಭಕ್ತರು ಅವಕಾಶ ಮಾಡಿಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ

Advertisement

ತನ್ನ ಸ್ವಂತ ಪತ್ನಿಯನ್ನೇ ತಿರಸ್ಕರಿಸಿದ ಪ್ರಧಾನಿ ಮೋದಿಯವರು ಹೆಂಡತಿಗಾಗಿಯೇ ದಶಕಗಳನ್ನು ಸವೆಸಿದ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನಾ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ಪ್ರಶ್ನಿಸಿ ಸುಬ್ರಮಣಿಯನ್‌ ಸ್ವಾಮಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement
Tags :
Advertisement