For the best experience, open
https://m.newskannada.com
on your mobile browser.
Advertisement

ಮೇಕೆ ಮರಿಗೆ ಹಾಲುಣಿಸುವ ಶ್ವಾನ: ಈ ಮಾತೃತ್ವದ ಪ್ರೀತಿ ನೀವೂ ಕಣ್ತುಂಬಿಕೊಳ್ಳಿ

ಸಾಕು ಪ್ರಾಣಿಗಳಲ್ಲಿ ನಿಯತ್ತಿನ ಪ್ರಾಣಿ ಎಂದರೆ ನಾಯಿ ಇಲ್ಲೊಂದು ಅಪರೂಪದ ನಾಯಿಯೊಂದು ಕೆಲವು ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಅದರ ಮೇಲೆ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ಮರಿಗಳು ಮುದ್ದಾಗಿದ್ದ ಕಾರಣಕ್ಕೆ ಅವುಗಳನ್ನು ಸಾಕಲು ಬೇರೆಯವರು ತೆಗೆದುಕೊಂಡು ಹೋಗಿದ್ದಾರೆ. 
11:47 AM Jan 10, 2024 IST | Ashitha S
ಮೇಕೆ ಮರಿಗೆ ಹಾಲುಣಿಸುವ ಶ್ವಾನ  ಈ ಮಾತೃತ್ವದ ಪ್ರೀತಿ ನೀವೂ ಕಣ್ತುಂಬಿಕೊಳ್ಳಿ

ದೊಡ್ಡಬಳ್ಳಾಪುರ: ಸಾಕು ಪ್ರಾಣಿಗಳಲ್ಲಿ ನಿಯತ್ತಿನ ಪ್ರಾಣಿ ಎಂದರೆ ನಾಯಿ ಇಲ್ಲೊಂದು ಅಪರೂಪದ ನಾಯಿಯೊಂದು ಕೆಲವು ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಅದರ ಮೇಲೆ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ಮರಿಗಳು ಮುದ್ದಾಗಿದ್ದ ಕಾರಣಕ್ಕೆ ಅವುಗಳನ್ನು ಸಾಕಲು ಬೇರೆಯವರು ತೆಗೆದುಕೊಂಡು ಹೋಗಿದ್ದಾರೆ.

Advertisement

ಇದರ ನೋವು ಅರಿತೋ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಶ್ವಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪದ ಮಾತೃತ್ವಕ್ಕೆ ಜನರು ನಾಯಿ ಪ್ರೀತಿಗೆ ಮಾರುಹೋಗಿದ್ದಾರೆ.

ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ.  ಈ  ಮೇಕೆ ಮರಿಯನ್ನು ಕಾಶ್ಮೀರದಿಂದ ಕೃಷ್ಣಪ್ರಸಾದ್ ಅವರು ತೆಗೆದುಕೊಂಡು ಬಂದಿದ್ದಾರೆ. ಈ  ಮೇಕೆ ಮರಿ  ಜನ್ಮ ನೀಡಿದ ತಾಯಿಗಿಂತ ನಾಯಿಯೊಂದಿಗೆ ಹೆಚ್ಚು ಒಡನಾಟವನ್ನು ಹೊಂದಿದೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಇಷ್ಟೇ ಅಲ್ಲ ದೊಡ್ಡಿಯಲ್ಲಿರುವ ಮೇಕೆಗಳ ಕಾವಲು ಕೂಡಾ ಈ ಶ್ವಾನವೇ ಕಾಯುತ್ತದೆ. ಯಾರೇ ಅಪರಿಚಿತರು ಬಂದರೂ ಮೇಕೆಗಳನ್ನು ಮುಟ್ಟಲು ಬಿಡುವುದಿಲ್ಲ ಅಂತೆ. ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆ.

Advertisement

Advertisement
Tags :
Advertisement