ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಾಲಿ ಪಿಕ್ಚರ್ಸ್​​ನಿಂದ ಮತ್ತೊಂದು ಸಿನಿಮಾ: ಇವರೇ ನೋಡಿ‌ ನಾಯಕ

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿದ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್​ನಿಂದ ನಡುವೆ ಅಂತರವಿರಲಿ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ 'ಜೆಸಿ' ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆಯೇ ಜೆಸಿ.
05:56 PM Feb 14, 2024 IST | Ashitha S

ಬೆಂಗಳೂರು:  ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿದ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್​ನಿಂದ ನಡುವೆ ಅಂತರವಿರಲಿ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ "ಜೆಸಿ" ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆಯೇ ಜೆಸಿ.

Advertisement

"ಜೆಸಿ" ಸಿನಿಮಾದ ಮುಹೂರ್ತ ನೆರವೇರಿತು. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಜೆಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.

ಜೆಸಿ ಫಸ್ಟ್ ಲುಕ್​​ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು 2018ರಲ್ಲಿ ರಿಲೀಸ್ ಆದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್ ಅವರ 2ನೇ ಸಿನಿಮಾ ಇದಾಗಿದೆ. ಸುಮಾರು 5 ವರ್ಷಗಳ ಬಳಿಕ ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

Advertisement

Advertisement
Tags :
LatestNewsNewsKannadaSANDALWOODಡಾಲಿಡಾಲಿ ಧನಂಜಯಡಾಲಿ ಪಿಕ್ಚರ್ಸ್ಪ್ರಖ್ಯಾತ್ಬೆಂಗಳೂರು
Advertisement
Next Article