For the best experience, open
https://m.newskannada.com
on your mobile browser.
Advertisement

ರಾಜಕಾರಣದಲ್ಲಿ ಧರ್ಮದ ವಿಚಾರ ತರಬೇಡಿ: ಶಾಸಕ ಪ್ರದೀಪ್ ಈಶ್ವರ್

ಬಜೆಟ್ ಅಧಿವೇಶನದಲ್ಲಿ ಜೈ ಶ್ರೀರಾಮ್, ಜೈ ಬೀಮ್ ಘೋಷಣೆ ಕೂಗಿದ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
08:37 AM Feb 18, 2024 IST | Ashika S
ರಾಜಕಾರಣದಲ್ಲಿ ಧರ್ಮದ ವಿಚಾರ ತರಬೇಡಿ  ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಬಜೆಟ್ ಅಧಿವೇಶನದಲ್ಲಿ ಜೈ ಶ್ರೀರಾಮ್, ಜೈ ಬೀಮ್ ಘೋಷಣೆ ಕೂಗಿದ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಚಿಕ್ಕಬಳ್ಳಾಪುರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮತ್ತೆ ಮತ್ತೆ ಹೇಳುತ್ತೇನೆ ರಾಜಕಾರಣದಲ್ಲಿ ಧರ್ಮದ ವಿಚಾರ ತರಬೇಡಿ, ನಮ್ಮಂಥಹ ಹಿಂದುಳಿದವರಿಗೆ ಶ್ರೀರಾಮನೂ ದೇವರೆ ಅಂಬೇಡ್ಕರ್ ದೇವರೇ ಎಂದು ಹೇಳಿದ್ದಾರೆ.

ನನ್ನಂಥಹ ಹಿಂದುಳಿದವನಿಗೆ ಅಂಬೇಡ್ಕರ್ ದೇವರು. ಅಂಬೇಡ್ಕರ್ ಆಶೀರ್ವಾದದಿಂದಲೇ ನನಂತಹ ಹುಡುಗ ಎಂಎಲ್ ಎ ಆಗಿದ್ದು, ನಾನು ಇವತ್ತು ಹೇಳ್ತೀನಿ ಆವತ್ತು ಹೇಳ್ತೀನಿ ಜೈ ಭೀಮ್ ಅಂತ ಎಂದು ಹೇಳಿದ್ದಾರೆ.

Advertisement

ಬಳಿಕ ಮಾತನಾಡಿದ ಅವರು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ಸರ್ಕಲ್ ನಲ್ಲಿ ಅಂಬೇಡ್ಕರ್ ವಿಗ್ರಹ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Advertisement
Tags :
Advertisement