ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಯಲ್ಲಿ ಡಾ.ಬ್ರೋ: ಅಭಿಮಾನಿಗಳಿಗೆ ಹೊಸ ವರ್ಷದ ಮೊದಲ ಉಡುಗೊರೆ

ಬಹುದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಅದೃಶ್ಯರಾಗಿದ್ದ ಡಾ.ಬ್ರೋ ಹೊಸ ವರ್ಷದಂದು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾಗಿದ್ದು, ಇದು ಅವರ ಅಭಿಮಾನಿಗಳ ಪಾಲಿಗೆ ಶುಭಸುದ್ದಿಯಾಗಿದೆ. ರಾಮಜನ್ಮಭೂಮಿಯಾದ ಅಯೋಧ್ಯೆ ಹಾಗು ರಾಮಾಯಣಕ್ಕೆ ಹತ್ತಿರದ ಸಂಬಂಧವಿರುವ ನೇಪಾಳದ ಪರಿಚಯವನ್ನು ಅವರು ಮಾಡಿಸಿದ್ದಾರೆ.
08:02 PM Jan 01, 2024 IST | Maithri S

ಅಯೋಧ್ಯೆ: ಬಹುದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಅದೃಶ್ಯರಾಗಿದ್ದ ಡಾ.ಬ್ರೋ ಹೊಸ ವರ್ಷದಂದು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾಗಿದ್ದು, ಇದು ಅವರ ಅಭಿಮಾನಿಗಳ ಪಾಲಿಗೆ ಶುಭಸುದ್ದಿಯಾಗಿದೆ.

Advertisement

ರಾಮಜನ್ಮಭೂಮಿಯಾದ ಅಯೋಧ್ಯೆ ಹಾಗು ರಾಮಾಯಣಕ್ಕೆ ಹತ್ತಿರದ ಸಂಬಂಧವಿರುವ ನೇಪಾಳದ ಪರಿಚಯವನ್ನು ಅವರು ಮಾಡಿಸಿದ್ದಾರೆ. ರಾಮನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಒಂದಾದ ಸರಯೂ ನದಿಯ ದಡಕ್ಕೆ ಭೇಟಿ ಕೊಟ್ಟ ಗಗನ್‌ ವೀಕ್ಷಕರಿಗೆ ಅದರ ಪರಿಚಯ ಮಾಡಿಸಿದರು. ನಂತರ ಹನುಮಾನ ಗಡಿಯಂತಹ ಇನ್ನೂ ಅನೇಕ ಸ್ಥಳಗಳಿಗೆ ತೆರಳಿ ದೇವಸ್ಥಾನಗಳ ದರ್ಶನ ಮಾಡಿಸಿದ್ದಾರೆ.
ಅಲ್ಲಿರುವ ಸಾಲಿಗ್ರಾಮ, ಸೀತಾ-ರಾಮರ ವಿಗ್ರಹ ಕೆತ್ತಲ್ಪಟ್ಟ ಕಲ್ಲಿನ ಇತಿಹಾಸಗಳಂತಹ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನಂತರ ಸೀತಾಮಾತೆಯ ಜನ್ಮಸ್ಥಳವೆಂದು ನಂಬಲಾಗಿರುವ ನೇಪಾಳಕ್ಕೆ ತೆರಳಿ, ಅಲ್ಲಿನ ಕೆಲ ಸ್ಥಳಗಳು ಹಾಗು ಆಹಾರಗಳ ಪರಿಚಯ ಮಾಡಿಸಿದರು.

Advertisement
Advertisement
Tags :
AyodhyaDR BROindiaLatestNewsNEPALNewsKannada
Advertisement
Next Article