For the best experience, open
https://m.newskannada.com
on your mobile browser.
Advertisement

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಆರೋಪಕ್ಕೆ ಡಾ.ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ.
03:44 PM May 19, 2024 IST | Nisarga K
ರಘುಪತಿ ಭಟ್ ಆರೋಪಕ್ಕೆ ಡಾ  ಧನಂಜಯ ಸರ್ಜಿ ತಿರುಗೇಟು
ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಮಂಗಳೂರು: ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಆರೋಪಕ್ಕೆ ಡಾ.ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ.

Advertisement

ಮಂಗಳೂರಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ನಾನು ಹತ್ತನೇ ವಯಸ್ಸಿನಿಂದ ರಾಷ್ಟ್ರೀಯ ಸ್ವಯಂ ಸೇವಕ. ಬಸವೇಶ್ವರ ಶಾಖೆಯಲ್ಲಿ ಸ್ವಯಂ ಸೇವಕನಾಗಿ ಸೇವೆ ಆರಂಭಿಸಿರುವೆ.

ಸಂಘದ ಐಟಿಸಿ, ಓಟಿಸಿ ಆದವ, ಮೂವತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಓಟಿಸಿ ಆದವ ಮುಖ್ಯ ಶಿಕ್ಷಕನಾಗಿ ನಾನು ಸಂಘದಲ್ಲಿ ಇದ್ದವನು, ಸಂಘದ ಜವಾಬ್ದಾರಿ ಇತ್ತು. ನಾನು ಹಲವು ವರ್ಷಗಳ ಹಿಂದಿನಿಂದಲೂ ಸಂಘದ ಕಾರ್ಯಕರ್ತ. ಸಂಘಟನೆಯ ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಕೆಲಸ ಮಾಡ್ತಿದ್ದೆ. ಶಿವಮೊಗ್ಗದ ಹರ್ಷಾ ಮತ್ತು ಕುಟುಂಬ ನನಗೆ ಆಪ್ತರು . ಆವತ್ತು‌ ನಾವು ನಡೆಸಿದ ಶಾಂತಿಯ ನಡಿಗೆ ಎಲ್ಲರನ್ನೂ ಸೇರಿಸಿ. ಎಲ್ಲಾ ಸಂಘ ಸಂಸ್ಥೆ, ಸಂತರನ್ನ ಸೇರಿಸಿ ಮೆರವಣಿಗೆ ಮಾಡಿದ್ದೇವೆ. ನಾನು ಬಿಜೆಪಿಗೆ ಜ್ಯೂನಿಯರ್ ಆಗಿದ್ದರೂ ಸಂಘದಲ್ಲಿ 36 ವರ್ಷದಿಂದ ಇದ್ದೇನೆ

Advertisement

ಹತ್ತು ವರ್ಷದಿಂದ ಎಲ್ಲಾ ಪೂರ್ಣಾವಧಿ ಕಾರ್ಯಕರ್ತರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇದೆ. ಸಂಘದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಬೇರೆ ಕಾರ್ಯಕರ್ತರ ಸಂಪರ್ಕ ಇದೆ. ನಾನು ಸಂಘ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತೇನೆ. ನನ್ನಲ್ಲಿ ಇರೋದು ಸಂಘಟನೆ ಶಕ್ತಿ, ಆರೋಪಗಳು ಬರುತ್ತದೆ ಹೋಗ್ತದೆ. ಬಿಜೆಪಿಯ ನಿರ್ಧಾರವನ್ನ ಎಲ್ಲಾ ಹಿರಿಯರೂ ಸೇರಿ ಮಾಡ್ತಾರೆ. ಪಕ್ಷದ ಹಿರಿಯರು ಹಾಗೂ ಕೇಂದ್ರದ ಹಿರಿಯರು ಆಯ್ಕೆ ಮಾಡಿದ್ದಾರೆ. ಆರ್.ಎಸ್.ಎಸ್ ಕೋಟಾ ಅಥವಾ ಬಿಜೆಪಿ ಕೋಟಾ ಆಯ್ಕೆ ಅನ್ನೋದಕ್ಕಿಂತ ಪದವೀಧರ ಅಭ್ಯರ್ಥಿ. ಚುನಾವಣೆಯಲ್ಲಿ ನಾಲ್ಕು ಮನೆಯನ್ನೂ ನೋಡದ ಆಯನೂರು ಮಂಜುನಾಥ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ ಈ ಬಾರಿಯೂ ಬಿಜೆಪಿಗೆ ಗೆಲುವು ಆಗಲಿದೆ ಎಂದರು.

Advertisement
Tags :
Advertisement