For the best experience, open
https://m.newskannada.com
on your mobile browser.
Advertisement

ರಾಜ್ಯಸಭೆಗೆ ಡಾ.ಸುಧಾಮೂರ್ತಿ ನಾಮ ನಿರ್ದೇಶನ; ಪ್ರಧಾನಿ ಮೋದಿ ಶುಭಾಶಯ

ಮಹಿಳಾ ದಿನಾಚರಣೆಯಂದೇ ಡಾ.ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
01:36 PM Mar 08, 2024 IST | Ashitha S
ರಾಜ್ಯಸಭೆಗೆ ಡಾ ಸುಧಾಮೂರ್ತಿ ನಾಮ ನಿರ್ದೇಶನ  ಪ್ರಧಾನಿ ಮೋದಿ ಶುಭಾಶಯ

ನವದೆಹಲಿ: ಮಹಿಳಾ ದಿನಾಚರಣೆಯಂದೇ ಡಾ.ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ  ಅವರೇ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಸಮಾಜ ಸೇವೆ, ದಾನ, ಶಿಕ್ಷಣ ಕ್ಷೇತ್ರದಲ್ಲಿ ಸುಧಾಮೂರ್ತಿ ಕೊಡುಗೆ ಅಪಾರ, ಸ್ಫೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಸುಧಾಮೂರ್ತಿ ಅವರ ಉಪಸ್ಥಿತಿ ನಮ್ಮ ನಾರಿಶಕ್ತಿಗೆ ಸಾಕ್ಷಿ, ಸುಧಾಮೂರ್ತಿ ಅವರಿಗೆ ಪಾರ್ಲಿಮೆಂಟ್ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಣೆಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

Advertisement
Tags :
Advertisement