For the best experience, open
https://m.newskannada.com
on your mobile browser.
Advertisement

ಕೆಎಂಸಿ ಆಸ್ಪತ್ರೆಯಲ್ಲಿ ಈಗ ಮಕ್ಕಳ ರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರು ಲಭ್ಯ

ಮಕ್ಕಳ ರೋಗಶಾಸ್ತ್ರದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಮಕ್ಕಳ ಮೂತ್ರರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರ ಸೇವೆ ಈಗ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದ್ದು, ಇದರೊಂದಿಗೆ ಆಸ್ಪತ್ರೆ ತನ್ನ ಮಕ್ಕಳ ಆರೈಕೆಯ ಸೌಲಭ್ಯಗಳನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ. 
03:12 PM May 14, 2024 IST | Ashitha S
ಕೆಎಂಸಿ ಆಸ್ಪತ್ರೆಯಲ್ಲಿ ಈಗ ಮಕ್ಕಳ ರೋಗಶಾಸ್ತ್ರ ತಜ್ಞರಾದ ಡಾ  ವಿಜಯ್ ಕುಮಾರ್ ಅವರು ಲಭ್ಯ
ಮಂಗಳೂರು: ಮಕ್ಕಳ ರೋಗಶಾಸ್ತ್ರದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಮಕ್ಕಳ ಮೂತ್ರರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರ ಸೇವೆ ಈಗ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದ್ದು, ಇದರೊಂದಿಗೆ ಆಸ್ಪತ್ರೆ ತನ್ನ ಮಕ್ಕಳ ಆರೈಕೆಯ ಸೌಲಭ್ಯಗಳನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ.
ಮೂರು ದಶಕಗಳ ಅತ್ಯುತ್ತಮ ವೃತ್ತಿಜೀವನ ಹೊಂದಿರುವ ಡಾ. ವಿಜಯ್ ಕುಮಾರ್, ಎಂಬಿಬಿಎಸ್, ಎಂಎಸ್, ಎಂಸಿಎಚ್(ಮಕ್ಕಳ ಶಸ್ತ್ರ ಚಿಕಿತ್ಸೆ) ಅವರು 20 ವರ್ಷಗಳಿಗೂ ಹೆಚ್ಚಿನ ಕಾಲ ವಿಭಾಗೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು  ಅತ್ಯಂತ ಹಿರಿಯ ಮತ್ತು ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿರುವ ವಿಭಾಗೀಯ ಮುಖ್ಯಸ್ಥರಾಗಿದ್ದಾರೆ. ವಿಸ್ತಾರವಾದ ಶ್ರೇಣಿಯ ಮಕ್ಕಳ ಶಸ್ತçಕ್ರಿಯಾ ವಿಧಾನಗಳಲ್ಲಿ ಡಾ. ವಿಜಯ್ ಅವರು ಪರಿಣತಿ ಹೊಂದಿರುತ್ತಾರೆ. ಅವುಗಳಲ್ಲಿ ನವಜಾತ ಶಿಶು ಶಸ್ತ್ರಚಿಕಿತ್ಸೆ, ಮಕ್ಕಳ ಮೂತ್ರರೋಗ ಶಾಸ್ತ್ರ, ಪಚನಾಂಗ ರೋಗಶಾಸ್ತ್ರ , ಹೆಪಟೋಬಿಲಿಯರಿ, ಜೆನಿಟೋಯುರಿನರಿ ಪುನರ್ ನಿರ್ಮಾಣ, ಹದಿಹರೆಯದ ಮಹಿಳಾ ರೋಗಶಾಸ್ತ್ರ ಕನಿಷ್ಟ ಗಾಯದ ಶಸ್ತ್ರಚಿಕಿತ್ಸೆ, ಎದೆಭಾಗದ ಶಸ್ತ್ರ ಚಿಕಿತ್ಸೆ ಮತ್ತು ಗಡ್ಡೆಗಳ ನಿರ್ವಹಣೆಗಳು ಸೇರಿರುತ್ತವೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಡಾ. ವಿಜಯ್ ಅವರು ಈ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನ ಸಂಪಾದಿಸಿರುತ್ತಾರೆ. ಶಸ್ತ್ರಕ್ರಿಯಾ ಉತ್ಕೃಷ್ಟತೆ ಮತ್ತು ರೋಗಿಗಳ ಆರೈಕೆಗೆ ಸಮರ್ಪಿತರಾದ ಇವರು ಈ ಪ್ರದೇಶದಲ್ಲಿ ಅತ್ಯಂತ ಕೌಶಲ್ಯಪೂರ್ಣ ಶಸ್ತçಕ್ರಿಯಾ ತಜ್ಞರಲ್ಲಿ ಒಬ್ಬರೆಂಬ ಹೆಸರು ಗಳಿಸಿರುತ್ತಾರೆ. ಸಾವಿರಾರು ಅನನ್ಯ ಮತ್ತು ಸಂಕೀರ್ಣ ಶಸ್ತçಚಿಕಿತ್ಸೆಗಳನ್ನು ಯಶಸ್ವಿ ಫಲಿತಾಂಶಗಳೊಂದಿಗೆ ಅವರು ನಡೆಸಿರುತ್ತಾರೆ.
ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಕಿ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಡಾ. ವಿಜಯ್ ಅವರ ಹಾಜರಿ ಕುರಿತು ಪ್ರತಿಕ್ರಿಯಿಸಿ, ಮಾತನಾಡಿ, ``ನಮ್ಮ ಆರೋಗ್ಯ ಸೇವಾ ವೃತ್ತಿಪರರ ತಂಡಕ್ಕೆ ಡಾ. ವಿಜಯ್ ಕುಮಾರ್ ಅವರನ್ನು ಸ್ವಾಗತಿಸಲು ನಾವು ಹರ್ಷಿಸುತ್ತೇವೆ. ಅವರ ಹಾಜರಿಯು ನಮ್ಮ ಮಕ್ಕಳ ಶಸ್ತ್ರ ಚಿಕಿತ್ಸಾ ಸೇವೆಗಳನ್ನು ನಿಸ್ಸಂದೇಹವಾಗಿ ವಿಸ್ತರಿಸುವುದಲ್ಲದೆ, ನಮ್ಮ ಸಮುದಾಯದಲ್ಲಿನ ಮಕ್ಕಳು ಮತ್ತು ಕುಟುಂಬಗಳಿಗೆ ಲಾಭದಾಯಕವಾಗಲಿದೆ. ಕರ್ನಾಟಕದ ಎಲ್ಲೆಡೆ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಾಖಲೆಯೊಂದಿಗೆ ಅವರ ಆಳವಾದ ಪರಿಣತಿಯು ನಮ್ಮ ಸಮುದಾಯದ ಆರೋಗ್ಯ ಸೇವಾ ಅಗತ್ಯಗಳಿಗೆ ಅಮೂಲ್ಯ ಬೆಂಬಲದ ಭರವಸೆ ನೀಡಿದೆ’’ ಎಂದರು.
ಮಂಗಳೂರಿನ ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿನ ಸಮಗ್ರ ಮಕ್ಕಳ ಆರೈಕೆ ಕೇಂದ್ರ ಮಕ್ಕಳ ಅಗತ್ಯಗಳಿಗೆ ವಿಶೇಷ ಆರೈಕೆಯ ಸೇವೆಗಳನ್ನು ಸಾದರಪಡಿಸುತ್ತಿದೆ. ಇವುಗಳಲ್ಲಿ ಸಾಮಾನ್ಯ ಮಕ್ಕಳ ಆರೈಕೆ, ಪ್ರತಿರಕ್ಷಣಾ ಸೇವೆಗಳು, ಅಲರ್ಜಿ ಕ್ಲಿನಿಕ್, ಹದಿಹರೆಯದವರ ಕ್ಲಿನಿಕ್, ಮಕ್ಕಳ ಮಾನಸಿಕ ಶಾಸ್ತ್ರ ಮತ್ತು ಸಮಾಲೋಚನೆ, ಮಕ್ಕಳ ಮೂತ್ರಪಿಂಡ ಶಾಸ್ತ್ರ, ಮಕ್ಕಳ ನಿರ್ನಾಳ ಗ್ರಂಥಿ ಶಾಸ್ತ್ರ ಮಕ್ಕಳ ಶಸ್ತ್ರಕ್ರಿಯೆ ಮತ್ತು ಮಕ್ಕಳ ಮೂತ್ರರೋಗ ಶಾಸ್ತ್ರಗಳು ಸೇರಿರುತ್ತವೆ.
Advertisement
Advertisement
Tags :
Advertisement