ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಲಿಕಾನ್ ಸಿಟಿಗೆ ಆಗಮಿಸಿದ "ನಮ್ಮ ಮೆಟ್ರೋ"ದ ಮೊದಲ ಚಾಲಕ ರಹಿತ ರೈಲು

ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹೆಮ್ಮೆಯ ವಿಚಾರ. ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೆಂಗಳೂರಿಗೆ ಆಗಮಿಸಿದೆ. ಚೆನ್ನೈ ಬಂದರಿನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಆಗಮಿಸಿದೆ. 6 ಬೋಗಿಗಳನ್ನು ಟ್ರೇಲರ್ ಮೂಲಕ ತರಲಾಗಿದೆ.
11:37 AM Feb 14, 2024 IST | Ashitha S

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹೆಮ್ಮೆಯ ವಿಚಾರ. ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೆಂಗಳೂರಿಗೆ ಆಗಮಿಸಿದೆ. ಚೆನ್ನೈ ಬಂದರಿನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಆಗಮಿಸಿದೆ. 6 ಬೋಗಿಗಳನ್ನು ಟ್ರೇಲರ್ ಮೂಲಕ ತರಲಾಗಿದೆ.

Advertisement

ನಮ್ಮ ಮೆಟ್ರೋದ ಚಾಲಕ ರಹಿತ ರೈಲು ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ಲೈನ್ ನಲ್ಲಿ ಪ್ರಾಯೋಗಿಕವಾಗಿ ಸಂಚರಿಸಲಿದೆ.

ಚೀನಾದ ಸಿಆರ್ ಆರ್ ಸಿ ನಾನ್ ಜಿಂಗ್ ಪುಜೆನ್ ಕಂ. ಲಿಮಿಟೆಡ್ ನಿಂದ ಈ ರೈಲು ತಯಾರಾಗಿದೆ. ಚೀನಾದ ಶಾಂಘೈ ಬಂದರಿನಿಂದ ಜನವರಿ 24ರಂದು ಸಮುದ್ರ ಮಾರ್ಗವಾಗಿ ಚಾಲಕ ರಹಿತ ರೈಲು ಬೋಗಿಗಳನ್ನು ಸಾಗಿಸಲಾಗಿತ್ತು. ಫೆ.6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು.

Advertisement

ಇದೀಗ ರಸ್ತೆ ಮಾರ್ಗದ ಮೂಲಕವಾಗಿ ಚೆನ್ನೈನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗಿದೆ. ಈ ಚಾಲಕ ರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚರಿಸಲಿದೆ. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್‌ ಸಹಾಯದಿಂದ ಸಂಚರಿಸುತ್ತದೆ.

 

Advertisement
Tags :
indiaLatestNewsNewsKannadaನಮ್ಮ ಮೆಟ್ರೋನವದೆಹಲಿಬೆಂಗಳೂರು
Advertisement
Next Article