For the best experience, open
https://m.newskannada.com
on your mobile browser.
Advertisement

ಕಾಲಲ್ಲಿ ಡ್ರೈವಿಂಗ್; ಸಾಧನೆಯಲ್ಲ, ಸ್ಟಂಟ್

ಇಲ್ಲೊಬ್ಬ ಭೂಪ ಕಾಲಿನಿಂದ ಡ್ರೈವ್ ಮಾಡುವ ಮಹಾ ಸ್ಟಂಟ್ ಮಾಡಿದ್ದಾನೆ. ಆತ ಡ್ರೈವರ್ ನ ಪಕ್ಕದ ಪ್ರಯಾಣಿಕರ ಆಸನದಲ್ಲಿ ಕುಳಿತು ತನ್ನ ಕಾಲನ್ನು ಸ್ಟೇರಿಂಗ್ ನ ಮೇಲಿಟ್ಟು ತಿರುಗಿಸುತ್ತಾ ಗಮ್ಮತ್ತಿನಲ್ಲಿ ಸಾಗುತ್ತಿದ್ದಾನೆಸ್ವಲ್ಪ ಹೊತ್ತಿನ ನಂತರ ಅದೇ ಸೀಟ್ ನಲ್ಲಿ ಕುಳಿತೇ ಅವನು ಒಂದು ಕೈಯ್ಯಿಂದ ಕಾರು ಚಲಾಯಿಸುವುದನ್ನು ಕಾಣಬಹುದು.
07:25 PM Jan 08, 2024 IST | Maithri S
ಕಾಲಲ್ಲಿ ಡ್ರೈವಿಂಗ್  ಸಾಧನೆಯಲ್ಲ  ಸ್ಟಂಟ್

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಜನರನ್ನು ರಸ್ತೆಗಳಲ್ಲಿ ಕಾಣುವುದು ಹೊಸತೇನಲ್ಲ. ಹಾಗೆ ಮಾಡುವುದು ಸುರಕ್ಷಿತವೂ ಅಲ್ಲ. ಅದರ ನಡುವೆ ಆಗೀಗ ಚಿತ್ರವಿಚಿತ್ರ ಸ್ಟಂಟ್‌ ಗಳ ಮೂಲಕ ಜನರನ್ನು ರಂಜಿಸುವ ಹಾಗು ಗಾಬರಿಪಡಿಸುವ ವ್ಯಕ್ತಿಗಳು ಪ್ರತ್ಯಕ್ಷರಾಗುತ್ತಾರೆ.

Advertisement

ಹೀಗಿರುವಾಗ ಇಲ್ಲೊಬ್ಬ ಭೂಪ ಕಾಲಿನಿಂದ ಡ್ರೈವ್ ಮಾಡುವ ಮಹಾ ಸ್ಟಂಟ್ ಮಾಡಿದ್ದಾನೆ. ಆತ ಡ್ರೈವರ್ ನ ಪಕ್ಕದ ಪ್ರಯಾಣಿಕರ ಆಸನದಲ್ಲಿ ಕುಳಿತು ತನ್ನ ಕಾಲನ್ನು ಸ್ಟೇರಿಂಗ್ ನ ಮೇಲಿಟ್ಟು ತಿರುಗಿಸುತ್ತಾ ಗಮ್ಮತ್ತಿನಲ್ಲಿ ಸಾಗುತ್ತಿದ್ದಾನೆಸ್ವಲ್ಪ ಹೊತ್ತಿನ ನಂತರ ಅದೇ ಸೀಟ್ ನಲ್ಲಿ ಕುಳಿತೇ ಅವನು ಒಂದು ಕೈಯ್ಯಿಂದ ಕಾರು ಚಲಾಯಿಸುವುದನ್ನು ಕಾಣಬಹುದು.

ವೀಡಿಯೋವನ್ನು ಆ ವ್ಯಕ್ತಿಯ ಹಿಂದಿನ ವಾಹನದಲ್ಲಿ ಬರುತ್ತಿರುವವರು ಚಿತ್ರೀಕರಿಸಿಕೊಂಡಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ಇದಕ್ಕೆ ಜನ ನಾನಾರೀತಿಗಳಲ್ಲಿ ಪ್ರತಿಕ್ರಿಯಿಸುತ್ತಿದ್ದು, ಗಾಡಿಯ ನಂಬರ್ ಪ್ಲೇಟ್ ನಲ್ಲಿ ಯು.ಪಿ ಎಂದು ಬರೆದಿರುವುದರಿಂದ ಉತ್ತರಪ್ರದೇಶದ ಪೋಲೀಸರನ್ನು ಟ್ಯಾಗ್ ಮಾಡಲಾಗಿದೆ.

Advertisement
Tags :
Advertisement