ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತೀಯರಿದ್ದ ಹಡಗಿನ ಮೇಲೆ ಡ್ರೋನ್ ದಾಳಿ; ನೆರವಿಗೆ ಧಾವಿಸಿದ INS ವಿಶಾಖಪಟ್ಟಣಂ

ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ನ ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ ಮೇಲೆ ಗಲ್ಫ್ ಆಫ್ ಏಡನ್‌ನಲ್ಲಿ ಡ್ರೋನ್ ದಾಳಿಯಾಗಿದ್ದು, INS ವಿಶಾಖಪಟ್ಟಣಂ ಕೂಡಲೆ ಸಹಾಯಕ್ಕೆ ಧಾವಿಸಿದೆ. ಹಡಗಿನಲ್ಲಿ ೯ ಭಾರತೀಯರು ಸೇರಿ ೨೨ ಸಿಬ್ಬಂದಿಗಳಿದ್ದರು.
06:51 PM Jan 18, 2024 IST | Maithri S

ನವದೆಹಲಿ: ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ನ ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ ಮೇಲೆ ಗಲ್ಫ್ ಆಫ್ ಏಡನ್‌ನಲ್ಲಿ ಡ್ರೋನ್ ದಾಳಿಯಾಗಿದ್ದು, INS ವಿಶಾಖಪಟ್ಟಣಂ ಕೂಡಲೆ ಸಹಾಯಕ್ಕೆ ಧಾವಿಸಿದೆ. ಹಡಗಿನಲ್ಲಿ ೯ ಭಾರತೀಯರು ಸೇರಿ ೨೨ ಸಿಬ್ಬಂದಿಗಳಿದ್ದರು.

Advertisement

ಡ್ರೋನ್ ದಾಳಿಯ ಪರಿಣಾಮ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಸಕಾಲದಲ್ಲಿ ನಂದಿಸಿ ನಿಯಂತ್ರಣಕ್ಕೆ ತರಲಾಯಿತು. ಯಾರಿಗೂ ಯಾವುದೇ ಹಾನಿಯಾಗಿಲ್ಲ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣಂ ಸ್ಥಳಕ್ಕೆ ತೆರಳಿ ದಾಳಿಗೆ ತಕ್ಕ ಉತ್ತರ ನೀಡಿದೆ ಎಂದು ನೌಕಾಪಡೆ ಹೇಳಿದೆ.

Advertisement

ಇತ್ತೀಚೆಗೆ ಅರಬ್ಬೀ ಸಮುದ್ರದಲ್ಲಿ ಸಾಗುವ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಟ್ಟುಕೊಂಡು ಕಡಲ್ಗಳ್ಲರು ಮಾಡುತ್ತಿರುವ ದಾಳಿ ಹೆಚ್ಚುತ್ತಿದೆ. ಹೌತಿಗಳು ಹಾಗು ಕಡಲ್ಗಳ್ಳರ ದಾಳಿ ಅನೇಕ ದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿಸಿರುವ ಹಿನ್ನಲೆಯಲ್ಲಿ ಐಎನ್‌ಎಸ್ ವಿಶಾಖಪಟ್ಟಣಂ ಅನ್ನು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳಿಗಾಗಿ ಅಡೆನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿದೆ.

Advertisement
Tags :
DRONE ATTACKindiaINDIAN NAVYINS VishakhapattanamLatestNewsNewsKannada
Advertisement
Next Article