For the best experience, open
https://m.newskannada.com
on your mobile browser.
Advertisement

ದುಬೈನಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆಯಿಂದ ಮೇ 26ರಂದು ʼದುಬೈ ಡ್ಯಾನ್ಸ್ ಕಪ್ -2024ʼ ಆಯೋಜನೆ

1985 ರಲ್ಲಿ ಆರಂಭವಾದ ದುಬೈನ ಮೊಟ್ಟ ಮೊದಲ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಕರ್ನಾಟಕ ಸಂಘ ದುಬೈ ಆಯೋಜನೆಯ “ದುಬೈ ಡ್ಯಾನ್ಸ್ ಕಪ್ -2024”ರ ಸಮಾರಂಭ ಅದ್ಧೂರಿಯಾಗಿ ಮೇ 26ರ ರಂದು ನಡೆಯಲಿದೆ. ಬೆಳಗ್ಗೆ 1ಒ ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಇಂಡಿಯಾನ್‌ ಅಕಾಡೆಮಿ ಸ್ಕೂಲ್‌ ಅಲ್‌ ಕ್ವಾಸಿ ದುಬೈ ಅಲ್ಲಿ ನಡೆಯಲಿದೆ.
11:53 AM May 15, 2024 IST | Ashitha S
ದುಬೈನಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆಯಿಂದ ಮೇ 26ರಂದು ʼದುಬೈ ಡ್ಯಾನ್ಸ್ ಕಪ್  2024ʼ ಆಯೋಜನೆ

ದುಬೈ: 1985 ರಲ್ಲಿ ಆರಂಭವಾದ ದುಬೈನ ಮೊಟ್ಟ ಮೊದಲ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಕರ್ನಾಟಕ ಸಂಘ ದುಬೈ ಆಯೋಜನೆಯ “ದುಬೈ ಡ್ಯಾನ್ಸ್ ಕಪ್ -2024”ರ ಸಮಾರಂಭ ಅದ್ಧೂರಿಯಾಗಿ ಮೇ 26ರ ರಂದು ನಡೆಯಲಿದೆ. ಬೆಳಗ್ಗೆ  10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಇಂಡಿಯಾನ್‌ ಅಕಾಡೆಮಿ ಸ್ಕೂಲ್‌ ಅಲ್‌ ಕ್ವಾಸಿ ದುಬೈ ಅಲ್ಲಿ ನಡೆಯಲಿದೆ.

Advertisement

ಈ ಅದ್ದೂರಿ ಡಾನ್ಸ್‌ ಸ್ಪರ್ಧೆಗೆ ನಿರ್ಣಾಯಕರಾಗಿ ಚಂದನವನದ ನಟ, ನಾಟ್ಯ ಭೂಷಣ ಡಾ. ಸಂಜಯ್‌ ಶಾಂತರಾಮ್‌ ಅವರು ಸಹಕರಿಸಲಿದ್ದಾರೆ.

ಕರ್ನಾಟಕ ಸಂಘ ದುಬೈ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಡಿಡಿಸಿ ಕನ್ನಡ ಭಾಷೆ ಮತ್ತು ನೃತ್ಯ ಕಲೆಯನ್ನು ಉತ್ತೇಜಿಸುವ ವಾರ್ಷಿಕ ಕಾರ್ಯಕ್ರಮ ಇದಾಗಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿವಾಸಿ ಕನ್ನಡಿಗರಿಗೆ ಮಾನ್ಯತೆ ಮತ್ತು ಖ್ಯಾತಿಯನ್ನು ನೀಡುತ್ತದೆ. ಈ ಬಹುನಿರೀಕ್ಷಿತ ಡಿಡಿಸಿ -2024 ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಯುಎಇಯ ನೃತ್ಯ ತಂಡಗಳು 2024ರ ಮೇ 16ರ ರೊಳಗೆ ಸಂಘದ ಈ ಕೆಳಗಿನ ಯಾವುದೇ ಕಾರ್ಯನಿರ್ವಾಹಕರನ್ನು ಸಂಪರ್ಕಿಸುವ ಮೂಲಕ ಮೂಲಕ ತಮ್ಮ ತಂಡಗಳನ್ನು ನೋಂದಾಯಿಸಲು ತಿಳಿಸಿದ್ದಾರೆ.

Advertisement

ಹೆಚ್ಚಿನ ಮಾಹಿತಿಗಾಗಿ : 055 548 5003, 056 760 3132, 050 243 3262 ಸಂಪರ್ಕಿಸಬಹುದು.

ದುಬೈ ಡ್ಯಾನ್ಸ್ ಕಪ್ 2024 – ಸ್ಪರ್ಧೆಯ ವಿವರಗಳು:
ಸ್ಪರ್ಧೆ ದಿನಾಂಕ : 26ನೇ ಮೇ 2024
ನೃತ್ಯ ವಿಭಾಗ ಹೀಗಿದೆ:
> ಜಾನಪದ ನೃತ್ಯ : ಎಲ್ಲಾ ವಯಸ್ಸಿನವರು
> ಸಿನಿಮೀಯ ನೃತ್ಯ : ಸೀನಿಯರ್ & ಜೂನಿಯರ್

ಅಲ್ಲದೆ ಡ್ರಾಯಿಂಗ್‌, ರಂಗೋಲಿ ಕಲಾಕೃತಿ ಪ್ರದರ್ಶನ, ಏಕವ್ಯಕ್ತಿ ಅಭಿನಯ ಸ್ಪರ್ದೆ ಕೂಡ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 055 548 5003 / 050 243 3263 / 056 760 3132

Advertisement
Tags :
Advertisement