ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದುಬೈ: ಇಸ್ರೇಲ್ ಮೂಲದ 'ಗ್ಯಾಲಕ್ಸಿ ಲೀಡರ್' ಹಡಗು ಅಪಹರಣ

ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ 'ಗ್ಯಾಲಕ್ಸಿ ಲೀಡರ್' ಹಡಗಿನ ಯೆಮೆನ್ ಮೂಲದ ಹೌತಿ ಬಂಡುಕೋರರು ಅಪಹರಣ ಮಾಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
08:05 PM Nov 25, 2023 IST | Ashika S

ದುಬೈ: ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಯೆಮೆನ್ ಮೂಲದ ಹೌತಿ ಬಂಡುಕೋರರು ಅಪಹರಣ ಮಾಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

Advertisement

ಇದೀಗ ಇಸ್ರೇಲಿ ಬಿಲಿಯನೇರ್ ಒಡೆತನದ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಮಹಾಸಾಗರದಲ್ಲಿ ಶಂಕಿತ ಇರಾನ್‌ನ ಡ್ರೋನ್‌ನಿಂದ ಈ ದಾಳಿ ನಡೆದಿದೆ ಎಂದು ಅಮೆರಿಕಾದ ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುಪ್ತಚರ ವಿಷಯಗಳ ಬಗ್ಗೆ ಚರ್ಚಿಸಲು ಅನಾಮಧೇಯತೆಯ ಷರತ್ತಿನ ಮೇಲೆ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ರಕ್ಷಣಾ ಅಧಿಕಾರಿಯೊಬ್ಬರು, ಹಿಂದೂ ಮಹಾಸಾಗರದಲ್ಲಿ ಕಂಟೈನರ್ ಹಡಗಿನ ಮೇಲೆ ದಾಳಿ ನಡೆದಿದೆ. ಶಾಹೆದ್-136 UAV ಡ್ರೋನ್‌ಗಳಿಂದ ದಾಳಿ ಮಾಡಲಾಗಿದ್ದು ಡ್ರೋನ್‌ ದಾಳಿಯಿಂದಾಗಿ ಹಡಗಿಗೆ ಹಾನಿಯಾಗಿದೆ. ಆದರೆ, ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದರು.

Advertisement

ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ದಾಳಿಯ ಹಿಂದೆ ಇರಾನ್ ಇದೆ ಎಂದು ಅಮೆರಿಕಾ ಮಿಲಿಟರಿ ಏಕೆ ನಂಬುತ್ತದೆ ಎಂಬುದನ್ನು ವಿವರಿಸಲು ಅವರು ನಿರಾಕರಿಸಿದರು.

Advertisement
Tags :
LatetsNewsNewsKannadaಅಪಹರಣಇಸ್ರೇಲ್‌ಗ್ಯಾಲಕ್ಸಿ ಲೀಡರ್ಭಾರತಹೌತಿ ಬಂಡುಕೋರ
Advertisement
Next Article