For the best experience, open
https://m.newskannada.com
on your mobile browser.
Advertisement

ಶಾಲೆಯ ಎದುರು ಮಕ್ಕಳಿಗೆ ಚಾಕು ಇರಿತ: ಉದ್ವಿಗ್ನಗೊಂಡ ಪರಿಸ್ಥಿತಿ

ಐರ್​ಲೆಂಡ್​: ಐರ್​ಲೆಂಡ್​ನ ಡಬ್ಲಿನ್​ನಲ್ಲಿ ಶಾಲೆಯ ಹೊರಭಾಗ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಈ ಕಾರಣದಿಂದ ಪ್ರತಿಭಟನಾಕಾರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
10:12 AM Nov 24, 2023 IST | Ashitha S
ಶಾಲೆಯ ಎದುರು ಮಕ್ಕಳಿಗೆ ಚಾಕು ಇರಿತ  ಉದ್ವಿಗ್ನಗೊಂಡ  ಪರಿಸ್ಥಿತಿ

ಐರ್​ಲೆಂಡ್​: ಐರ್​ಲೆಂಡ್​ನ ಡಬ್ಲಿನ್​ನಲ್ಲಿ ಶಾಲೆಯ ಹೊರಭಾಗ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಈ ಕಾರಣದಿಂದ ಪ್ರತಿಭಟನಾಕಾರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

Advertisement

ಕಾನ್ನೆಲ್ ಸೇತುವೆ ಬಳಿ ಲಿಫೆ ನದಿಯ ಮೇಲೆ ಕಾರುಗಳು ಹಾಗೂ ಬಸ್​ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕೆಲವು ಜನರು ಇದೇ ಸಂದರ್ಭದಲ್ಲಿ ಅಂಗಡಿಗಳನ್ನು ಕೂಡ ಲೂಟಿ ಮಾಡಿದ್ದಾರೆ. ಇನ್ನು ಚೂರಿ ಇರಿತದಲ್ಲಿ ಐದು ವರ್ಷದ ಬಾಲಕಿಗೆ ಗಂಭೀರ ಗಾಯಗಳಾಗಿವೆ.

ಆದರೆ ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ, ಹಲವಾರು ವಾಹನಗಳು ಮತ್ತು ಟ್ರಾಮ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

Advertisement
Tags :
Advertisement