ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

50ನೇ ವಸಂತಕ್ಕೆ ಕಾಲಿಟ್ಟ ದುನಿಯಾ ವಿಜಯ್: ಅಪ್ಪ-ಅಮ್ಮನ ಸಮಾಧಿ‌‌ ಮುಂದೆ ಬರ್ತ್​​ಡೇ

ನಟ ದುನಿಯಾ ವಿಜಯ್  ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ. ಕಳೆದ ವರ್ಷದಂತೆ ಈ ವರ್ಷವೂ‌‌ ಕೂಡ ವಿಜಯ್  ಅವರು ಅಪ್ಪ-ಅಮ್ಮನ ಸಮಾಧಿ‌‌ ಮುಂದೆ ಬರ್ತ್​​ಡೇಯನ್ನು ಅಭಿಮಾನಿಗಳೊಟ್ಟಿಗೆ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
09:16 AM Jan 20, 2024 IST | Ashika S

ಬೆಂಗಳೂರು: ನಟ ದುನಿಯಾ ವಿಜಯ್  ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ. ಅವರ ಬರ್ತ್ ಡೇ ಪ್ರಯುಕ್ತ ಈಗಾಗಲೇ ಭೀಮಾ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.

Advertisement

ಕಳೆದ ವರ್ಷದಂತೆ ಈ ವರ್ಷವೂ‌‌ ಕೂಡ ವಿಜಯ್  ಅವರು ಆನೇಕಲ್​ನಲ್ಲಿರುವ ಬಳಿಯ ಕುಂಬಾರನಹಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ಅಪ್ಪ-ಅಮ್ಮನ ಸಮಾಧಿ‌‌ ಮುಂದೆ ಬರ್ತ್​​ಡೇಯನ್ನು ಅಭಿಮಾನಿಗಳೊಟ್ಟಿಗೆ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.

ತಂದೆ-ತಾಯಿ ಸಮಾಧಿಯನ್ನ ದೇವಸ್ಥಾನದ ರೀತಿ ಕಟ್ಟಿಸಿ ವಿಶೇಷವಾಗಿ ಅಲಂಕಾರ ಮಾಡಿದ್ದರು. ಬಳಿಕ ಪೂಜೆ ಮಾಡಿ, ಬರೋ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ದಿನ ಪೂರ್ತಿ ಕಳೆಯಲಿದ್ದಾರೆ.

Advertisement

ರಾತ್ರಿಯಿಂದಲೇ ಬರ್ತ್​ಡೇಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಅಲ್ಲದೇ ಸಾಕಷ್ಟು ಅಭಿಮಾನಿಗಳು ರಾತ್ರಿಯೇ ಆಗಮಿಸಿ ವಿಶ್ ಮಾಡಿದ್ದರು. ಒಟ್ಟು 5 ಸಾವಿರ ಅಭಿಮಾನಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ.

Advertisement
Tags :
LatetsNewsNewsKannadaಜನ್ಮದಿನದುನಿಯಾ ವಿಜಯ್ಬರ್ತ್​ಡೇಸಮಾಧಿ
Advertisement
Next Article