For the best experience, open
https://m.newskannada.com
on your mobile browser.
Advertisement

ದುನಿಯಾ ವಿಜಯ್ ಸಿನಿಮಾದ ಪೋಸ್ಟರ್ ರಿವೀಲ್: ಚಿತ್ರರಂಗಕ್ಕೆ ಮಗಳ ಎಂಟ್ರಿ

ದುನಿಯಾ ವಿಜಯ್  ನಟನೆಯ 29ನೇ ಸಿನಿಮಾ ಇಂದು ಘೋಷಣೆ ಆಗಿದೆ. ಈ ಚಿತ್ರದ ಮೂಲಕ ಅವರ ಮಗಳು ಮೋನಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
11:21 AM Apr 11, 2024 IST | Ashika S
ದುನಿಯಾ ವಿಜಯ್ ಸಿನಿಮಾದ ಪೋಸ್ಟರ್ ರಿವೀಲ್  ಚಿತ್ರರಂಗಕ್ಕೆ ಮಗಳ ಎಂಟ್ರಿ

ದುನಿಯಾ ವಿಜಯ್ ನಟನೆಯ 29ನೇ ಸಿನಿಮಾ ಇಂದು ಘೋಷಣೆ ಆಗಿದೆ. ಈ ಚಿತ್ರದ ಮೂಲಕ ಅವರ ಮಗಳು ಮೋನಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

Advertisement

ವಿಜಯ್  ನಟನೆಯ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ಎದುರು ಭಾಗದಲ್ಲಿರುವ ಕಟ್ಟಡ ಬೆಂಕಿಯಿಂದ ಹತ್ತಿ ಉರಿಯುತ್ತಿದೆ. ಇದಕ್ಕೆ ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಲೈನ್ ಕೂಡ ಇದೆ. ಇದರಿಂದ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ಮೋನಿಕಾ ಅವರು ಸಿನಿಮಾದಲ್ಲಿ ವಿಜಯ್‍ ಮಗಳಾಗಿಯೇ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ರಚಿತಾ ರಾಮ್‍ ನಾಯಕಿ ಎನ್ನಲಾಗಿದೆ. ‘ಸಾರಥಿ’ ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್‍ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Advertisement

ಈ ಸಿನಿಮಾಗೆ ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ನಿರ್ದೇಶನದಲ್ಲೂ ಸಾಕಷ್ಟು ಅನುಭವ ಇದೆ.

Advertisement
Tags :
Advertisement