For the best experience, open
https://m.newskannada.com
on your mobile browser.
Advertisement

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವುದು ಬಹುತೇಖ ಅನುಮಾನವಿದ್ದು, ಇದೀಗ ಆರ್​ಸಿಬಿ ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​ ಆಗಿದೆ.
03:19 PM May 17, 2024 IST | Chaitra Kulal
ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವುದು ಬಹುತೇಖ ಅನುಮಾನವಿದ್ದು, ಇದೀಗ ಆರ್​ಸಿಬಿ ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​ ಆಗಿದೆ.

Advertisement

ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.  ಹೇಗಾದರೂ ಪಂದ್ಯದ ದಿನ ಮಳೆ ಬಾರದಿರಲಿ ಎಂದು ಆರ್​ಸಿಬಿ ಆಟಗಾರರು ಡ್ರೆಸಿಂಗ್​ ರೋಮ್​ನಲ್ಲಿ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕೃಷ್ಣ ನಾಮ ಜಪಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಸಲಿಗೆ ಆರ್​ಸಿಬಿ ಆಟಗಾರರು ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿಲ್ಲ. ಬದಲಾಗಿ ನೆಟ್ಟಿಗರು ಈ ವಿಡಿಯೊವನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ. ಪ್ರತಿ ಪಂದ್ಯ ಗೆದ್ದಾಗ ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಂಭ್ರಮಿಸುತ್ತಾರೆ. ಈ ವಿಡಿಯೊಗೆ ಕೃಷ್ಣ ನಾಮ ಜಪವನ್ನು ಮತ್ತು ಹವಾಮಾನ ಇಲಾಖೆಯ ವರದಿಯ ಫೋಟೊವನ್ನು ಎಡಿಟ್​​ ಮಾಡಲಾಗಿದೆ.

Advertisement

ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಆರ್​ಸಿಬಿ-ಸಿಎಸ್​ಕೆ​ ನಡುವಣ ಪಂದ್ಯದ ಅಂತಿಮ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಪಂದ್ಯವನ್ನು ರದ್ದು ಎಂದು ನಿರ್ಧರಿಸಲಾಗುತ್ತದೆ.

ಒಂದು ವೇಳೆ ಮಳೆ ಬಂದು, ಉದಾಹರಣೆಗೆ ನಿಗದಿತ 10 ಓವರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ 10 ಓವರ್ ಆಡಿ, 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್​ಗಳನ್ನು ಪೂರ್ತಿಗೊಳಿಸಿದರೆ ಮಾತ್ರ ಆಗ ಡಕ್​ವರ್ತ್ ಲೂಯಿಸ್ ನಿಯಮ ಅನ್ವಯವಾಗುತ್ತದೆ.

ಪಂದ್ಯ ಆರಂಭಗೊಂಡ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

ಮಳೆಯಿಂದಾಗಿ ಪಂದ್ಯ ರದ್ದಾದರೆ ಚೆನ್ನೈ ತಂಡ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈಗಾಗಲೇ ಚೆನ್ನೈ 14 ಅಂಕಗಳನ್ನು ಹೊಂದಿದ್ದು ಪಂದ್ಯ ರದ್ದಾದ ಕಾರಣ ಸಿಗುವ ಒಂದು ಅಂಕದಿಂದ ಒಟ್ಟು ಅಂಕ 15ಕ್ಕೇ ಏರಿಕೆಯಾಗುತ್ತದೆ.

ಇನ್ನುಳಿದ ಯಾವುದೇ ತಂಡಕ್ಕೂ ಈ ಮೊತ್ತವನ್ನು ಮೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚೆನ್ನೈಗೆ ಮಳೆ ವರದಾನವಾಗಲಿದೆ. ಆರ್​ಸಿಬಿ ತಂಡವು 13 ಅಂಕಗಳೊಂದಿಗೆ ಐಪಿಎಲ್​ನಿಂದ ಹೊರಬೀಳಲಿದೆ.

Advertisement
Tags :
Advertisement