ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಒಂದೇ ದಿನ ಅಪ್ಘಾನಿಸ್ತಾನ, ತಜಕಿಸ್ತಾನದಲ್ಲಿ ಭೂಕಂಪ

ಇಂದು ಬೆಳ್ಳಂಬೆಳಗ್ಗೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ  ಭೂಕಂಪ ಸಂಭವಿಸಿದೆ.
09:10 AM Jan 17, 2024 IST | Ramya Bolantoor

ಕಾಬೂಲ್‌ : ಇಂದು ಬೆಳ್ಳಂಬೆಳಗ್ಗೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ  ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ತಜಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ವರದಿಯಾಗಿದೆ.

Advertisement

ಬುಧವಾರ ಬೆಳಿಗ್ಗೆ 6: 10 ಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟಿತ್ತು. ಈ ಭೂಕಂಪದ ಆಳವು ಭೂಮಿಯಿಂದ 13 ಕಿಲೋಮೀಟರ್ ದೂರದಲ್ಲಿತ್ತು.

ಬುಧವಾರ ಮುಂಜಾನೆ 2:52 ಕ್ಕೆ ತಜಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆಯನ್ನು 4.1 ರಷ್ಟು ಅಳೆಯಲಾಗಿದ್ದು, ಅದರ ಆಳವು 181 ಕಿಲೋಮೀಟರ್ ಕೆಳಗಿದೆ. ತಜಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.

Advertisement

 

Advertisement
Tags :
LatestNewsNewsKannadaಕಾಬೂಲ್‌
Advertisement
Next Article